Asianet Suvarna News Asianet Suvarna News

ಕಲಘಟಗಿ ಅತಿರಥರ ಅಖಾಡ:ಸಿದ್ದು – ಡಿಕೆ ಬಣ ಬಡಿದಾಟದ ಭವಿಷ್ಯವೇನು..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ  ಕಲಘಟಗಿ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

ಕಲಘಟಗಿ. ಧಾರವಾಡ ಜಿಲ್ಲೆಯ ತಾಲೂಕು ಕೇಂದ್ರ. ಮರಾಠರ ಕಾಲದಲ್ಲಿ ಸಾಮಂತರ ಆಡಳಿತ ಕೇಂದ್ರವಾಗಿತ್ತು. ಮರದ ಬಣ್ಣದ ತೊಟ್ಟಿಲು ಅಂದರೂ ನೆನಪಾಗೋದೇ ಕಲಘಟಗಿ. ರಾಜಕೀಯವಾಗಿಯೂ ಕೂಡ ತುಂಬಾನೇ ಸದ್ದು ಮಾಡೋ ಕಲಘಟಗಿಯಲ್ಲಿ ಸಂತೋಷ್ ಲಾಡ್ ಸೆಂಟರ್ ಆಫ್ ಅಟ್ರಾಕ್ಷನ್. ಈ ಬಾರಿ ಸಿದ್ದು ಬಣದ ಸಂತೋಷ್ ಲಾಡ್ ಗೆ ಟಿಕೆಟೋ ಅಥವಾ ಡಿಕೆ ಶಿವಕುಮಾರ್ ಬಣದ ನಾಗರಾಜ್ ಛಬ್ಬಿಗೆ ಟಿಕೆಟೋ ಅನ್ನೋದು ಅತ್ಯಂತ ಕುತೂಹಲದ ಪ್ರಶ್ನೆಯಾಗಿದೆ. 2018 ಬಿಜೆಪಿಯ ಸಿ.ಎಂ. ನಿಂಬಣ್ಣವರ್ 83,267 ಮತಗಳನ್ನ ಪಡೆದು  ಸಂತೋಷ್ ಎಸ್ ಲಾಡ್ ಎದುರು ಗೆದ್ದಿದ್ದರು. ಸಂತೋಷ್ ಲಾಡ್, 57,270 ಮತಗಳಿಸಿದ್ದರು. ಈ ಬಾರಿ ಹೇಗಾದ್ರೂ ಮಾಡಿ ಮತ್ತೆ ಗೆಲ್ಲಬೇಕು ಅನ್ನೋದು ಸಂತೋಷ್ ಲಾಡ್ ಸಂಕಲ್ಪ. ಕೈಲಿರೋ ಕ್ಷೇತ್ರವನ್ನ ಯಾವ್ದೇ ಕಾರಣಕ್ಕೂ ಕಾಂಗ್ರೆಸ್ ಕೈ ಸೇರದಂತೆ ನೋಡಿಕೊಳ್ಳೋದು ಬಿಜೆಪಿಯ ಸವಾಲು