ವರುಣಾ ಅತಿರಥರ ಅಖಾಡ: ಸಿದ್ದು ವಿರುದ್ಧ ನಿಲ್ಲೋಕೆ ವಿಜಯೇಂದ್ರ ರೆಡಿ..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ವರುಣಾ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

Share this Video
  • FB
  • Linkdin
  • Whatsapp

ವರುಣಾ ವಿಧಾನಸಭಾ ಕ್ಷೇತ್ರವು ಸಿದ್ದರಾಮಯ್ಯ ಕೋಲಾರ ಬಿಟ್ಟ ಮೇಲೆ ರಂಗೇರಿದೆ. ಮಗನಿಗಾಗಿ ಬಿಟ್ಟು ಕೊಟ್ಟಿದ್ದ ಕ್ಷೇತ್ರವನ್ನ ಮಗನ ಬಳಿಯೇ ಸಿದ್ದು ಕೇಳಿ ವಾಪಸ್ ತಗೋತಾರೆ ಎಂದು ಹೇಳಲಾಗುತ್ತಿದೆ. ಮೈಸೂರಿನ ಎಲ್ಲಾ ಕ್ಷೇತ್ರಗಳ ತೂಕ ಒಂದಾದ್ರೆ ವರುಣಾದ ತೂಕವೇ ಇನ್ನೊಂದು. ಸದ್ಯಕ್ಕೆ ವರುಣ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ನಿಖರವಾದ ಅಭ್ಯರ್ಥಿಗಳ ಹೆಸರು ಪ್ರಕಟ ಆಗಿಲ್ಲ. ಕಾಂಗ್ರೆಸ್ ನಿಂದ ಹಾಲಿ ಶಾಸಕ, ಮಾಜಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ರಾಮಯ್ಯ ಅವರೇ ಕಣದಲ್ಲಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿರುವ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸುರಕ್ಷಿತವಾದ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಅಂತಹವರ ಕಣ್ಣಿಗೆ ಈಗ ಬಿದ್ದಿರುವುದು ವರುಣ ವಿಧಾನಸಭಾ ಕ್ಷೇತ್ರ. ಎಲ್ಲಾ ರಾಜಕೀಯ ಲೆಕ್ಕಾಚಾರಗಳು, ರಾಜಕೀಯ ಒಳ ತಂತ್ರಗಳು, ಮತಗಳ ವಿಭಜನೆ ವಿಚಾರದಲ್ಲಿ ಅಳೆದು ತೂಗಿ ಲೆಕ್ಕಾಚಾರ ಮಾಡಿರುವ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಹೆಚ್ಚು ಒಲವನ್ನು ತೋರಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದೇ ಆದರೆ ಯತೀಂದ್ರ ಸಿದ್ದರಾಮಯ್ಯ ಕೂಡ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ರೆಡಿ ಇದ್ದಾರೆ. ಯಾವಾಗ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರ ಮುಂದೆ ಬಂತು‌ ಬಿಜೆಪಿಯಲ್ಲಿ ಕೂಡ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಮಾತುಗಳು ಕೇಳಿ ಬಂದಿವೆ. ಹೀಗಾದಾಗ ವೀರಶೈವ ಲಿಂಗಾಯಿತ ಮತಗಳ ದೃವೀಕರಣವಾಗಲಿದ್ದು ಬಿಜೆಪಿಯು ಸಿದ್ದರಾಮಯ್ಯ ವಿರುದ್ಧ ಪ್ರಬಲ ಹೋರಾಟ ನಡೆಸಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಇಟ್ಟುಕೊಂಡಂತಿದೆ. 

Related Video