Assembly election: ಸಿದ್ದು ಆಯ್ತು, ಈಗ ಶ್ರೀರಾಮುಲು ಕ್ಷೇತ್ರ ಚರ್ಚೆ: ಬೆಳಗಾವಿಯಲ್ಲಿ ಮಸೀದಿ ಪಾಲಿಟಿಕ್ಸ್

ರಾಜ್ಯ ರಾಜಕಾರಣದಲ್ಲಿ ಕ್ಷೇತ್ರ ಬದಲಾವಣೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರದಿ ಮುಗಿಯುತ್ತಿದ್ದಂತೆ, ಈಗ ಸಚಿವ ಶ್ರೀರಾಮುಲು ಅವರು ಕ್ಷೇತ್ರ ಬದಲಾವಣೆ ಮಾಡುವುದಕ್ಕೆ ಮುಂದಾಗಿದ್ದಾರೆ.

First Published Jan 10, 2023, 8:32 PM IST | Last Updated Jan 10, 2023, 8:32 PM IST

ಬೆಂಗಳೂರು (ಜ.10): ರಾಜ್ಯ ರಾಜಕಾರಣದಲ್ಲಿ ಕ್ಷೇತ್ರ ಬದಲಾವಣೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರದಿ ಮುಗಿಯುತ್ತಿದ್ದಂತೆ, ಈಗ ಸಚಿವ ಶ್ರೀರಾಮುಲು ಅವರು ಕ್ಷೇತ್ರ ಬದಲಾವಣೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ವರುಣಾ ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ವೇಳೆ ವರುಣಾದಲ್ಲಿ ಸೋತು, ಬಾದಾಮಿಯಿಂದ ಗೆದ್ದಿದ್ದರು. ಆದರೆ, ಬೆಂಗಳೂರಿನಿಂದ ಬಾದಾಮಿ ದೂರವಾಗುತ್ತದೆ ಎಂಬ ಕಾರಣಕ್ಕೆ ಬೆಂಗಳೂರು ಸುತ್ತಲಿನ ಕ್ಷೇತ್ರಕ್ಕೆ ಹುಡುಕಾಟ ನಡೆಸಿದ್ದಾರೆ. ಹೀಗಾಗಿ, ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಅವರ ಕ್ಷೇತ್ರ ಹುಡುಕಾಟ ಮುಗಿಯಿತು ಎನ್ನುವಷ್ಟರಲ್ಲಿ ಈಗ ಸಚಿವ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರವನ್ನು ಬಿಟ್ಟು ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಕ್ಷೇತ್ರದ ಹುಡುಕಾಟ ನಡೆಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿನ ಮೀಸಲು ಕ್ಷೇತ್ರ ಹಾಗೂ ಇತರೆ ಸಾಮಾನ್ಯ ವರ್ಗದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಯಾವ ಕ್ಷೇತ್ರ ಅಂತಿಮ ಎಂಬುದನ್ನು ತೀರ್ಮಾನಿಸಿಲ್ಲ.