Asianet Suvarna News Asianet Suvarna News

Asianet Suvarna Focus ಈಶ್ವರಪ್ಪ ಪರ ದಳಪತಿ ಬ್ಯಾಟಿಂಗ್, ರಾಜ್ಯ ರಾಜಕಾರಣದಲ್ಲಿ ಸಂಚಲನ

ಅಷ್ಟಕ್ಕೂ ಈಶ್ವರಪ್ಪ ಪರ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ಯಾಕೆ ಎಂದು ರಾಜ್ಯ ರಾಜಕಾರಣಲ್ಲಿ ಚರ್ಚೆ ಶುರುವಾಗಿದೆ.  ಜಗ್ಗಲ್ಲ, ಬಗ್ಗಲ್ಲ, ರಾಜೀನಾಮೆ ಚಾನ್ಸೇ ಇಲ್ಲ. ಕಲಾಪದ ಕಥೆ ಏನಾಯ್ತು 

First Published Feb 19, 2022, 3:17 PM IST | Last Updated Feb 19, 2022, 3:17 PM IST

ಬೆಂಗಳೂರು, (ಫೆ.19): ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಬದಲು ಭಗವಾಧ್ವಜ ಹಾರಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಸಹ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ರೆ, ಅದ್ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ ಎಂದು ಸಚಿವ ಕೆಎಸ್‌ ಈಶ್ವರಪ್ಪ ಕಡ್ಡಿಮುರಿದಂತೆ ಹೇಳಿದ್ದಾರೆ.

ತಿರಂಗ ಜೊತೆ ಸದನಕ್ಕೆ ಬಂದ ವಿರೋಧ ಪಕ್ಷ, ಬಿಜೆಪಿ-ಕಾಂಗ್ರೆಸ್ ಕೋಲಾಹಲ

ಇನ್ನೊಂದೆಡೆ ಮಾಜಿ ಮುಖ್ಯಂತ್ರಿ ಎಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದಿದ್ದು,  ಕೆಎಸ್ ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.  ಕೆಂಪು ಕೋಟೆ ಮೇಲೆ ಮುಂದಿನ ವರ್ಷಗಳಲ್ಲಿ ಭಗವಾಧ್ವಜ ಹಾರಿಸಬಹುದು ಎಂದು ಹೇಳಿದ್ದಾರೆ. ಅವರೇನು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಲ್ಲವಲ್ಲಾ ಎಂದು ಈಶ್ವರಪ್ಪ ಪರ ಮೃದು ಧೋರಣೆ ತೋರಿದ್ದಾರೆ. 

ಅಷ್ಟಕ್ಕೂ ಈಶ್ವರಪ್ಪ ಪರ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ಯಾಕೆ ಎಂದು ರಾಜ್ಯ ರಾಜಕಾರಣಲ್ಲಿ ಚರ್ಚೆ ಶುರುವಾಗಿದೆ.  ಜಗ್ಗಲ್ಲ, ಬಗ್ಗಲ್ಲ, ರಾಜೀನಾಮೆ ಚಾನ್ಸೇ ಇಲ್ಲ. ಕಲಾಪದ ಕಥೆ ಏನಾಯ್ತು 

Video Top Stories