Asianet Suvarna News Asianet Suvarna News

ತಿರಂಗ ಜೊತೆ ಸದನಕ್ಕೆ ಬಂದ ವಿರೋಧ ಪಕ್ಷ, ಬಿಜೆಪಿ-ಕಾಂಗ್ರೆಸ್ ಕೋಲಾಹಲ

ರಾಷ್ಟ್ರಧ್ವಜ  ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ  ನೀಡಿದ್ದ ಹೇಳಿಕೆ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಕೋಲಾಹಲ ಉಂಟಾಯಿತು.

First Published Feb 16, 2022, 7:16 PM IST | Last Updated Feb 16, 2022, 7:16 PM IST

ಬೆಂಗಳೂರು(ಫೆ.16): ರಾಷ್ಟ್ರಧ್ವಜ (National Flag) ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (K S Eswarappa) ನೀಡಿದ್ದ ಹೇಳಿಕೆ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದು ಗದ್ದಲ, ಗೊಂದಲ, ಕೋಲಾಹಲದಿಂದ ಸದನ ಮುಂದೂಡಿದ ಪ್ರಸಂಗ ಜರುಗಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ನಡುವೆ ಮಾತಿನ ಯುದ್ಧ ನಡೆದಿದೆ. ಈಶ್ವರಪ್ಪ ರಾಷ್ಟ್ರದ್ರೋಹಿ ಎಂದು ಡಿಕೆಶಿ ಕೂಗುತ್ತಿದ್ದಂತೆ ಈಶ್ವರಪ್ಪ ನಾನಲ್ಲ ರಾಷ್ಟ್ರದ್ರೋಹಿ ನೀನು ಎಂದು ವಾಗ್ದಾಳಿ ನಡೆಸಿದ್ದಾರೆ. 

KS Eshwarappa Statement : ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಚಿಂತನೆ

ಕೆಲದಿನಗಳ ಹಿಂದೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಂಪುಕೋಟೆ (Red Port) ಮೇಲೆ ಕೇಸರಿ (saffron ) ಧ್ವಜ ಹಾರಿಸುವ ಕುರಿತು ನೀಡಿರುವ ಹೇಳಿಕೆಯ ವಿರುದ್ಧ ವಿಧಾನಸಭೆಯಲ್ಲಿ (assembly session) ಕೊಲಾಹಲ ಸೃಷ್ಟಿಸಿತು. ಈಶ್ವರಪ್ಪ ಮಾತಿನ ಬಗ್ಗೆ ಸಿದ್ದರಾಮಯ್ಯ (siddaramaiah) ಧ್ವನಿ ಎತ್ತುತ್ತಿದ್ದಂತೆ, ಡಿ.ಕೆ ಶಿವಕುಮಾರ್, ಈಶ್ವರಪ್ಪ ವಿರುದ್ಧ ವಾಕ್ಸಮರ ನಡೆಸಿದರು. 

Video Top Stories