ಗ್ಯಾರಂಟಿಗಳು ಬಿಟ್ಟರೇ, ಯಾವುದೇ ಅಭಿವೃದ್ಧಿ ಕಾರ್ಯಗಳು ಬಜೆಟ್‌ನಲ್ಲಿ ಇರುವುದಿಲ್ಲ: ಆರ್‌.ಅಶೋಕ್‌

ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಜನರ ಮೇಲೆ ಲೋನ್‌ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ ಎಂದು ಶಾಸಕ ಆರ್‌.ಅಶೋಕ್‌ ಹೇಳಿದ್ದಾರೆ.
 

First Published Jul 7, 2023, 1:32 PM IST | Last Updated Jul 7, 2023, 1:32 PM IST

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ನಿರುದ್ಯೋಗಿ ಯುವಕರಿಗೆ 2000 ರೂಪಾಯಿ ಸೇರಿದಂತೆ ಇತರ ಭರವಸೆಗಳನ್ನು ಕೊಟ್ಟಿದ್ದರೂ, ಆದ್ರೆ ಯಾವುದನ್ನು ಇನ್ನೂ ಈಡೇರಿಸಿಲ್ಲ. ಬಜೆಟ್‌ನಲ್ಲಿ (budget) ಲೋನ್‌ ತಗೋ ಬಗ್ಗೆ ಪ್ರಸ್ತಾಪ ಮಾಡೇ ಮಾಡುತ್ತಾರೆ ಎಂದು ಶಾಸಕ ಆರ್‌.ಅಶೋಕ್‌(R. Ashok) ಹೇಳಿದ್ದಾರೆ. ಅಂದರೆ ಕರ್ನಾಟಕದ ಜನತೆ ಮೇಲೆ ತೆರಿಗೆ ಹೊರೆಯನ್ನು ಸಿಎಂ ಹಾಕುತ್ತಿದ್ದಾರೆ. ಸಿಎಂ ರಾಜ್ಯದ ಜನತೆ ಮೇಲೆ ಲೋನ್‌ ಗೂಬೆಯನ್ನು ಕೂರಿಸುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ(Siddaramaiah) ಅವರು ನಮ್ಮದು ಪ್ರಗತಿದಾಯಕ ಬಜೆಟ್‌ ಎಂದಿದ್ದರು. ಈ ಸಾರಿ ನೋ ಡೆವಲಪ್‌ಮೆಂಟ್‌ ಎಂದಿದ್ದಾರೆ. ಇದು ಡೆವಲಪ್‌ಮೆಂಟ್‌ ಲೆಸ್‌ ಬಜೆಟ್‌ ಆಗಿದೆ. ಅವರ ಗ್ಯಾರಂಟಿ(Guarantee) ಯೋಜನೆಗಳು ಬಿಟ್ಟು, ಯಾವುದೇ ಅಭಿವೃದ್ಧಿ ಯೋಜನೆಗಳು ಬಜೆಟ್‌ನಲ್ಲಿ ಇರುವುದಿಲ್ಲ ಎಂದು ಶಾಸಕ ಆರ್‌. ಅಶೋಕ್‌ ಹೇಳಿದ್ದಾರೆ.   

ಇದನ್ನೂ ವೀಕ್ಷಿಸಿ:  ಮಹೇಶ್ ಬಾಬು ಮಗಳ ಮೊದಲ ಸಂಭಾವನೆ ಎಷ್ಟು ಗೊತ್ತಾ ?: ಒಂದು ಜಾಹೀರಾತಿಗೆ ಇಷ್ಟೊಂದು ಪಡೆದ್ರಾ ?