Arun Puttila: ಇಂದು ಬಹಿರಂಗವಾಗಲಿದ್ಯಾ ಅರುಣ್ ಪುತ್ತಿಲ ಅಂತಿಮ ನಡೆ..? ಬಿಜೆಪಿ ಹೇಳ್ತಿರೋದೇನು..?

ಪುತ್ತಿಲ ಪರಿವಾರ ವಿಸರ್ಜಿಸಿದ್ರೆ ಮಾತ್ರ ಬಿಜೆಪಿಗೆ ಬನ್ನಿ
ಅರುಣ್ ಪುತ್ತಿಲಗೆ ಕೆಲ ಬಿಜೆಪಿ ನಾಯಕರ ಒತ್ತಾಯ
ಬಿಜೆಪಿ ಸೇರ್ಪಡೆ ಬೇಡ ಎನ್ನುತ್ತಿರುವ ಕೆಲವರು

Share this Video
  • FB
  • Linkdin
  • Whatsapp

ಹಿಂದೂ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ಇಂದೇ‌ ನಿರ್ಧಾರವಾಗಲಿದೆ. ಈ ಬಗ್ಗೆ ನಿರ್ಧಾರ ತಿಳಿಸಲು ಇಂದೇ ಬಿಜೆಪಿ ನಾಯಕರಿಗೆ ಅಂತಿಮ ಡೆಡ್‌ಲೈನ್‌ ನೀಡಲಾಗಿದೆ. ಹಾಗಾಗಿ ಇಂದು ಸಮಾಲೋಚನಾ ಸಭೆಯನ್ನು ಅರುಣ್ ಪುತ್ತಿಲ(Arun Puttila) ಕರೆದಿದ್ದಾರೆ. ಪುತ್ತೂರಿನಲ್ಲಿ(Putturu) ಪುತ್ತಿಲ ಪರಿವಾರದ ಸಮಾಲೋಚನಾ ಸಭೆ ನಡೆಯಲಿದೆ. ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪುತ್ತಿಲ ಅಭಿಮಾನಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದುವರೆಯಲು ಪುತ್ತಿಲ ನಿರ್ಧಾರ ಮಾಡಿದ್ದಾರೆ. ಬಿಜೆಪಿ(BJP), RSS ಜೊತೆ ಹಲವು ಸುತ್ತಿನ ಮಾತುಕತೆ ಬಳಿಕ ನಿರ್ಧಾರ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ: ವಿಪಕ್ಷಗಳ ನಾಯಕರ ಬೆನ್ನು ಬಿದ್ದಿವೆಯಾ ತನಿಖಾ ಸಂಸ್ಥೆಗಳು ? ನಮ್ಮನ್ನು ಬಿಜೆಪಿಗೆ ಸೆಳೆಯಲು ಯತ್ನಿಸಲಾಗ್ತಿದೆ ಎಂದ ಕೇಜ್ರಿವಾಲ್!

Related Video