ವಿಪಕ್ಷಗಳ ನಾಯಕರ ಬೆನ್ನು ಬಿದ್ದಿವೆಯಾ ತನಿಖಾ ಸಂಸ್ಥೆಗಳು ? ನಮ್ಮನ್ನು ಬಿಜೆಪಿಗೆ ಸೆಳೆಯಲು ಯತ್ನಿಸಲಾಗ್ತಿದೆ ಎಂದ ಕೇಜ್ರಿವಾಲ್!

ಶಾಲೆಗಳನ್ನು ನಿರ್ಮಿಸಿದ್ದಕ್ಕೆ ಮನೀಶ್ ಸಿಸೋಡಿಯಾಗೆ ಜೈಲಿಗೆ ಹಾಕಿದ್ರಿ
ಮೊಹಲ್ಲಾ ಕ್ಲಿನಿಕ್‌ಗಳನ್ನು ಆರಂಭಿಸಿದ್ದರಿಂದ ಸತ್ಯೇಂದ್ರ ಜೈನ್ಗೆ ಜೈಲು
ಯಾವುದೇ ಕಾರಣಕ್ಕೂ ಬೆದರಿಕೆಗಳಿಗೆ ಮಣಿಯಲ್ಲ ಎಂದ ಕೇಜ್ರಿವಾಲ್

First Published Feb 5, 2024, 11:53 AM IST | Last Updated Feb 5, 2024, 11:53 AM IST

ಬಿಜೆಪಿ ವಿರುದ್ಧ ಅರವಿಂದ್‌ ಕೇಜ್ರಿವಾಲ್ ಬಿಗ್‌ ಬಾಂಬ್‌ ಸಿಡಿಸಿದ್ದಾರೆ. ED, CBI ಬಳಿಕ ದೆಹಲಿ ಪೊಲೀಸರು(Delhi Police) ಎಎಪಿ ಬೆನ್ನುಬಿದ್ದಾರೆ. ಬಿಜೆಪಿ(BJP) ವಿರುದ್ಧ ‘ಆಪರೇಷನ್’ ಬಾಂಬ್(Operation Bomb) ಹಾಕಿದ್ದಕ್ಕೆ ನೋಟಿಸ್ ನೀಡಲಾಗಿದೆ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಸಿಎಂ ಅರವಿಂದ ಕೇಜ್ರಿವಾಲ್(Arvind Kejriwal), ಸಚಿವೆ ಆತಿಶಿಗೆ ನೋಟಿಸ್ ನೀಡಲಾಗಿದೆ. ವಿವರಣೆ ನೀಡುವಂತೆ ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ತಾಕೀತು ಮಾಡಿದ್ದಾರೆ. ತನಿಖಾ ಸಂಸ್ಥೆಗಳ ನೋಟಿಸ್‌ ಕೇಜ್ರಿವಾಲ್  ಹೊಸ ಬಾಂಬ್ ಸಿಡಿಸಿದ್ದಾರೆ. ನಮ್ಮನ್ನು ಬಿಜೆಪಿಗೆ ಸೆಳೆಯಲು ಬಿಜೆಪಿಯಿಂದ ತನಿಖಾ ಸಂಸ್ಥೆಗಳ ಬಳಕೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾನು ಮಣಿಯಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ನೀವೇನೆ ಮಾಡಿದ್ರೂ ನಾವು ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  Amit Shah: ಹಳೇ ಮೈಸೂರು ಭಾಗವೇ ಟಾರ್ಗೆಟ್..ಹೇಗಿದೆ ಗೊತ್ತಾ ಶಾ ಗೇಮ್ ಪ್ಲ್ಯಾನ್..?