ಅರುಣ್ ಪುತ್ತಿಲ ಪಕ್ಷ ಸೇರ್ಪಡಗೆ ಬಿಜೆಪಿಗೇ ಗಡುವು ಕೊಟ್ಟರಾ..? 3 ದಿನಗಳ ಒಳಗೆ ಒಂದು ನಿರ್ಧಾರಕ್ಕೆ ಬರುತ್ತಾ ಬಿಜೆಪಿ?
ಅರುಣ್ ಪುತ್ತಿಲ ಪಕ್ಷ ಸೇರ್ಪಡೆಗೆ ಬಿಜೆಪಿಗೆ ಡೆಡ್‌ಲೈನ್
ಬಿಜೆಪಿಗೆ 3 ದಿನಗಳ ಗಡುವು ನೀಡಿದ ಪುತ್ತಿಲ ಪರಿವಾರ
ಮೋದಿಗಾಗಿ ನಾವು ಬಿಜೆಪಿಗೆ ಹೋಗಲು ಸಿದ್ಧರಿದ್ದೇವೆ
ಅರುಣ್ ಪುತ್ತಿಲ ಬಿಜೆಪಿಗೆ(BJP) ಸೇರ್ಪಡೆಗೊಳ್ಳುವ ಬಗ್ಗೆ ಪಕ್ಷಕ್ಕೆ ಗಡುವು ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಪುತ್ತಿಲ ಪರಿವಾರದಿಂದಲೇ ಬಿಜೆಪಿ ಹೈಕಮಾಂಡ್‌ಗೆ ಷರತ್ತು ವಿಧಿಸಲಾಗಿದೆಯಂತೆ. ಪುತ್ತೂರಿನಲ್ಲಿ(Putturu) ನಡೆದ ಸಮಾವೇಶದಲ್ಲಿ ಬಿಜೆಪಿಗೆ ಡೆಡ್ ಲೈನ್ ನೀಡಲಾಗಿದೆ. ಮೂರು ದಿನಗಳ ಒಳಗೆ ಬಿಜೆಪಿ ನಿರ್ಧಾರಕ್ಕೆ ಬರಬೇಕು. ಅರುಣ್ ಪುತ್ತಿಲಗೆ(Arun Puttila) ಸೂಕ್ತ ಸ್ಥಾನಮಾನದ ಭರವಸೆ ನೀಡಬೇಕು. ದ್ವೇಷ ರಾಜಕಾರಣ ಮರೆತು ಅರುಣ್ ಪುತ್ತಿಲ ಸೇರಿಸಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆಯಂತೆ. ಪುತ್ತೂರು ಮಂಡಲದ ಬಿಜೆಪಿ ಅಧ್ಯಕ್ಷ ಸ್ಥಾನ ಪುತ್ತಿಲಗೆ ನೀಡಬೇಕು. ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಪುತ್ತಿಲ ಬಿಜೆಪಿ ಸೇರ್ಪಡೆಯಾಗಲಿದ್ದಾರಂತೆ. ಮೂರು ದಿನಗಳ ಒಳಗೆ ನಿರ್ಧಾರಕ್ಕೆ ಬರದಿದ್ದರೆ ಬಂಡಾಯ ಕಹಳೆ ಊದುವ ಸಾಧ್ಯತೆ ಇದೆ. ಪುತ್ತಿಲ ಪರಿವಾರದ ಸಮಾವೇಶದಲ್ಲಿ ಬಿಜೆಪಿಗೆ ಡೆಡ್‌ಲೈನ್ ನೀಡಲಾಗಿದೆ.
ಇದನ್ನೂ ವೀಕ್ಷಿಸಿ: ಗ್ಯಾರಂಟಿಗೆ ಖರ್ಚು ಮಾಡಿ ನಮ್ಮ ಮೇಲೆ ಆರೋಪ ಮಾಡಬೇಡಿ: ನಿರ್ಮಲಾ ಸೀತಾರಾಮನ್