ಗ್ಯಾರಂಟಿಗೆ ಖರ್ಚು ಮಾಡಿ ನಮ್ಮ ಮೇಲೆ ಆರೋಪ ಮಾಡಬೇಡಿ: ನಿರ್ಮಲಾ ಸೀತಾರಾಮನ್‌

ಲೋಕಸಭೆಯಲ್ಲೂ ಸದ್ದು ಮಾಡಿದ ಕರ್ನಾಟಕ ಅನುದಾನ ವಾರ್
ಕರ್ನಾಟಕ ಅನುದಾನ ವಿಷಯ ಪ್ರಸ್ತಾಪಿಸಿದ ಅಧೀರ್ ರಂಜನ್..!
ಅಧೀರ್ ರಂಜನ್ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್

First Published Feb 6, 2024, 1:37 PM IST | Last Updated Feb 6, 2024, 1:37 PM IST

ಅನುದಾನ ವಿಷಯದಲ್ಲಿ ನಾವು ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ. ಹಣಕಾಸು ಆಯೋಗ(Finance Commission) ಹೇಳಿದ್ದಷ್ಟು ಅನುದಾನ ನೀಡ್ತೀವಿ ಎಂದು ನಿರ್ಮಲಾ ಸೀತಾರಾಮನ್‌(Nirmala Sitharaman) ಹೇಳಿದ್ದಾರೆ. ರಾಜ್ಯಗಳಿಗೆ ಹಣ ಹಂಚಿಕೆ ನೇರ ತೆರಿಗೆ ರೂಪದಲ್ಲಿ ಬರುತ್ತೆ. ಅನುದಾನ ಹಂಚಿಕೆ ಹಣಕಾಸು ಆಯೋಗದ ವರದಿಯ ಮೇಲೆ ನಿರ್ಧಾರವಾಗಲಿದೆ. ಜಿಎಸ್‌ಟಿಯಲ್ಲಿ(GSt) ಎಸ್‌ಜಿಎಸ್‌ಟಿ ಸಂಪೂರ್ಣವಾಗಿ ರಾಜ್ಯಕ್ಕೆ ಹೋಗುತ್ತೆ. ಯಾವ ರಾಜ್ಯಕ್ಕೆ ಎಷ್ಟು ಹಣ ಎಂದು ಹಣಕಾಸು ಆಯೋಗ ನಿರ್ಧರಿಸುತ್ತೆ. ಹಣ ಬಿಡುಗಡೆ ವಿಚಾರದಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ. ನನಗೆ ಇಷ್ಟವಿರುವ ರಾಜ್ಯಕ್ಕೆ ಹಣ ಬಿಡುಗಡೆ ಅಧಿಕಾರ ನನಗಿಲ್ಲ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Narendra Modi: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳಿಸಲಿದೆ : ಸಂಸತ್‌ನಲ್ಲಿ ಮೋದಿಯಿಂದ 2ನೇ ಅವಧಿ ಕೊನೆ ಭಾಷಣ