ಡಿಕೆಶಿಯ ‘ಬ್ರ್ಯಾಂಡ್’ ಬೆಂಗಳೂರಿಗೆ ಮತ್ತಷ್ಟು ವೇಗ: ಸಿಲಿಕಾನ್ ಸಿಟಿ ಇತಿಹಾಸ ತಿಳಿಸಲು ‘ವೈಬ್ರೆಂಟ್’ ಆ್ಯಕ್ಷನ್

ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಕೆಂಪೇಗೌಡ ಕಾರಿಡಾರ್ ನಿರ್ಮಾಣ
ಇತಿಹಾಸ ತಿಳಿಸಲು ಡಿಸೆಂಬರ್‌ನಲ್ಲಿ 10 ದಿನ ಬೆಂಗಳೂರು ಹಬ್ಬ ಆಚರಣೆ
ನಗರದಲ್ಲಿ ಪಾರಂಪರಿಕ ಕಟ್ಟಡ, ಪರಿಸರ ತಾಣ ಗುರುತಿಸಿ ಜೀರ್ಣೋದ್ಧಾರ

First Published Aug 2, 2023, 11:05 AM IST | Last Updated Aug 2, 2023, 11:04 AM IST

ಬ್ರ್ಯಾಂಡ್ ಬೆಂಗಳೂರು ಡಿಸಿಎಂ ಡಿಕೆಶಿಯ(DCM DK Shivakumar) ದೊಡ್ಡ ಕನಸಾಗಿದೆ. ಅಭಿವೃದ್ಧಿ ಜೊತೆ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸೋದೇ ಮುಖ್ಯಗುರಿಯಾಗಿದೆ. ಇದರ ಭಾಗವಾಗಿಯೇ ಸಿಲಿಕಾನ್ ಸಿಟಿ ಇತಿಹಾಸ ಸಾರಲು ಹೊಸ ಬ್ಯೂ ಪ್ರಿಂಟ್ ರೆಡಿಯಾಗಿದೆ. ವೈಬ್ರೆಂಟ್ ಬೆಂಗಳೂರು(Vibrant Bengaluru) ಅಡಿಯಲ್ಲಿ ಆ್ಯಕ್ಷನ್ ಪ್ಲಾನ್ ಸಿದ್ಧಗೊಂಡಿದೆ. ಯಾವಾಗ ಬೆಂಗಳೂರು ಉಸ್ತುವಾರಿ ವಹಿಸಿಕೊಂಡ್ರು, ಆಗಿನಿಂದಲೇ ಸಿಲಿಕಾನ್ ಸಿಟಿಯ ಚಿತ್ರಣವನ್ನೇ ಬದಲಿಸಲು ಪಣ ತೊಟ್ರು. ಸತತ ಮೀಟಿಂಗ್, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದ ಡಿಸಿಎಂ ಹೊಸ ವಿನ್ಯಾಸ ನೀಡಲು ತಮ್ಮದೇ ತಂತ್ರ ಹೆಣೆಯುತ್ತಿದ್ದಾರೆ. ಅದರ ಭಾಗವಾಗಿಯೇ ವೈಬ್ರೆಂಟ್ ಬೆಂಗಳೂರು(Bengaluru) ಅಡಿಯಲ್ಲಿ ಇತಿಹಾಸ, ಕಲೆ, ಸಂಸ್ಕೃತಿ ಸಾರಲು ಈಗ ಆಕರ್ಷಕವಾಗಿ ಬ್ಲೂ ಪ್ರಿಂಟ್ ರೆಡಿಯಾಗಿದೆ. ತಜ್ಞರ ಅಭಿಪ್ರಾಯದಂತೆ 20 ಅಂಶಗಳನ್ನು ಒಳಗೊಂಡ ಕಾರ್ಯಕ್ರಮದ ಪಟ್ಟಿ ರೆಡಿ ಮಾಡಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಮ್ಪುರ ನೇತೃತ್ವದಲ್ಲಿ ಯೋಜನೆ ಸಿದ್ಧವಾಗಿದೆ. 

ಇದನ್ನೂ ವೀಕ್ಷಿಸಿ:  ಟೊಮ್ಯಾಟೋಗೆ ಫುಲ್ ಡಿಮ್ಯಾಂಡಪ್ಪೋ.. ಡಿಮ್ಯಾಂಡ್..! : ಬಂಡಾವಳ ಹಾಕಿದ್ದು 3 ಲಕ್ಷ ..ಲಾಭಗಳಿಸಿದ್ದು 30 ಲಕ್ಷ..!