ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಪ್ರಜಾಪ್ರತಿನಿಧಿ ನೇಮಿಸ್ತಾರಾ?: ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದೇನು?

ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಪ್ರಜಾಪ್ರತಿನಿಧಿ ನೇಮಿಸಲಾಗುತ್ತದೆ. ಅಲ್ಲದೇ ಅವರಿಗೂ ಸೇವಾಶುಲ್ಕ ಸಿಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

Share this Video
  • FB
  • Linkdin
  • Whatsapp

‘ಗೃಹ ಲಕ್ಷ್ಮಿ’ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಜನರಿಗೆ ಕಷ್ಟವಾಗಬಾರದು ಎಂಬ ಉದ್ದೇಶದಿಂದ ಚರ್ಚೆಯನ್ನು ನಡೆಸಿದ್ದೇವೆ. ಪ್ರಜಾಪ್ರತಿನಿಧಿ ಎಂದು ಒಂದು ಊರಲ್ಲಿ ಎನ್‌ರೋಲ್‌ ಮಾಡಿಕೊಂಡು ಅವರು ಈ ಯೋಜನೆ ಸಕ್ಸಸ್‌ ಕೈಜೋಡಿಸಬಹುದು ಅವರಿಗೆ ಹಣವನ್ನು ನೀಡಲಾಗುವುದು. ಈ ಯೋಜನೆ ಬಗ್ಗೆ ಚರ್ಚೆ ಮತ್ತು ಡಿಬೆಟ್‌ನನ್ನು ಮಾಡುತ್ತೇವೆ.ಸಂಪುಟ ಸಭೆಯಲ್ಲಿ ಹಿರಿಯ ಸದಸ್ಯರು ನೀಡಿದ ಸಲಹೆಗಳ ಹಿನ್ನೆಲೆ ಇನ್ನೂ 4-5 ದಿನಗಳ ಬಳಿಕ ಪೂರ್ಣ ಸಿದ್ಧತೆಯೊಂದಿಗೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು. ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ. ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ವಿಧಾನಪರಿಷತ್‌ನ 3 ಸ್ಥಾನಗಳಿಗೆ ಚುನಾವಣೆ:ಕಾಂಗ್ರೆಸ್‌ನ ಮಾಸ್ಟರ್‌ ಪ್ಲ್ಯಾನ್‌ ಏನು?

Related Video