Asianet Suvarna News Asianet Suvarna News

Annamalai: ದ್ರಾವಿಡರ ನಾಡಿನಲ್ಲಿ ಕಮಾಲ್ ಮಾಡುತ್ತಾ ಕೇಸರಿ ಬ್ರಿಗೇಡ್? ಅಣ್ಣಾಮಲೈ ಸ್ಪರ್ಧೆಯಿಂದ ರಂಗೇರಿದ 'ಲೋಕ' ಅಖಾಡ!

ತಮಿಳುನಾಡಿನ ಒಂಬತ್ತು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ
ಕೊಯಮತ್ತೂರ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈಗೆ ಟಿಕೆಟ್
ಮೊದಲ ಬಾರಿಗೆ ಲೋಕಸಭೆ ಅಖಾಡಕ್ಕೆ ಧುಮುಕಿದ ಅಣ್ಣಾಮಲೈ

First Published Mar 22, 2024, 1:42 PM IST | Last Updated Mar 22, 2024, 1:43 PM IST

ತಮಿಳುನಾಡಿನ ಒಂಬತ್ತು ಕ್ಷೇತ್ರಗಳಿಗೆ ಬಿಜೆಪಿ(BJP) ಟಿಕೆಟ್(Ticket) ಘೋಷಣೆ ಮಾಡಲಾಗಿದೆ. ದ್ರಾವಿಡರ ನೆಲದ ಮೇಲೆ ಕೇಸರಿ ಪಡೆಯ ಕಣ್ಣು ಬಿದ್ದಿದ್ದು, ದ್ರಾವಿಡರ ನಾಡಿನಲ್ಲಿ ಕಮಾಲ್ ಮಾಡುತ್ತಾ ಕೇಸರಿ ಬ್ರಿಗೇಡ್ ಎಂದು ಕಾದು ನೋಡಬೇಕಿದೆ. ಕೊಯಮತ್ತೂರ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈಗೆ(Annamalai) ಟಿಕೆಟ್ ನೀಡಲಾಗಿದೆ. ಮೊದಲ ಬಾರಿಗೆ ಲೋಕಸಭೆ(Loksabha) ಅಖಾಡಕ್ಕೆ ಅಣ್ಣಾಮಲೈ ಧುಮುಕಿದ್ದಾರೆ. ಅಣ್ಣಾಮಲೈ ಸ್ಪರ್ಧೆಯಿಂದ ರಂಗೇರಿದ ತಮಿಳುನಾಡು ಲೋಕಸಭಾ ಅಖಾಡ. 200 ದಿನಗಳ ಕಾಲ ರಾಜ್ಯಾದ್ಯಂತ ಪಾದಯಾತ್ರೆ ಮಾಡಿದ್ದ ಅಣ್ಣಾಮಲೈ. ‘ಎನ್ ಮನ್..ಎನ್ ಮಕ್ಕಳ್’ ಘೋಷವಾಕ್ಯದಡಿ ಅಣ್ಣಾಮಲೈ ಪಾದಯಾತ್ರೆ ಮಾಡಿದ್ದರು. ಡಿಎಂಕೆ ಸರ್ಕಾರದ ವಿರುದ್ಧ 228 ವಿಧಾನಸಭೆ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಲಾಗಿತ್ತು. ಮೊದಲ ಬಾರಿಗೆ ರಾಷ್ಟ್ರೀಯತೆ ಮೇಲೆ ಚುನಾವಣೆಗೆ ಬಿಜೆಪಿ ಪ್ಲ್ಯಾನ್‌ ಮಾಡಿದೆ.

ಇದನ್ನೂ ವೀಕ್ಷಿಸಿ:  5 ಸಚಿವರ ಮಕ್ಕಳು ಸೇರಿ 10 ಕ್ಷೇತ್ರದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್: ಸಚಿವರ ಸಹೋದರರಿಗೂ ಲೋಕಸಭೆ ಟಿಕೆಟ್ ಭಾಗ್ಯ !