Asianet Suvarna News Asianet Suvarna News

ರೈತರು, ಬಡವರ ಮಕ್ಕಳು ಉನ್ನತ ಹುದ್ದೆಗೆ ಹೋಗಲು ಕಾಂಗ್ರೆಸ್‌ಗೆ ಮತ ಹಾಕಿ: ಅಂಜಲಿ‌ ನಿಂಬಾಳ್ಕರ್

ಪ್ರಚಾರ ಸಭೆಯಲ್ಲಿ ಬಿಜೆಪಿಗರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ‌ ನಿಂಬಾಳ್ಕರ್ ಕಿಡಿಕಾರಿದ್ದು,ಬಿಜೆಪಿಗರು ಎಲ್ಲಾ ಇತಿಹಾಸ ತಿರುಚಿದ್ದಾರೆ ಎಂದರು. 
 

ಕಾರವಾರ: ಬಿಜೆಪಿಗರಿಗೆ ರಾಮನೊಬ್ಬನೇ ಸಾಕು, ಸೀತೆ ಬೇಡವಾಗಿದೆ. ಯಾವಾಗಲು ರಾಮನ ಜೊತೆ ಸೀತಾ,ಲಕ್ಷ್ಮಣ ಹಾಗೂ ಹನುಮ‌ ಇರಬೇಕು.
ಇದೇ ಹಿಂದುತ್ವದ ಸಂಸ್ಕೃತಿ, ಆದ್ರೆ ಬಿಜೆಪಿಗರು(BJP) ಎಲ್ಲಾ ಇತಿಹಾಸ ತಿರುಚಿದ್ದಾರೆ ಎಂದು ಹಳಿಯಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ‌ ನಿಂಬಾಳ್ಕರ್(Anjali Nimbalkar) ಹೇಳಿದ್ದಾರೆ. ಉತ್ತರ ಕನ್ನಡ(Uttara Kannada) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್, ಪ್ರಚಾರ ಸಭೆಯಲ್ಲಿ ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್ ಮಾಡಿ ದಾರಿ ತಪ್ಪಿಸುತ್ತಿದ್ದಾರೆ. ಈ ಬಾರಿ ಬಿಜೆಪಿಗರಿಗೆ ಬುದ್ಧಿ ಕಲಿಸಲು ಕಾಂಗ್ರೆಸ್ ಗೆ(Congress) ಮತ ಹಾಕಬೇಕಾಗಿದೆ. ಹಿಂದು ಧರ್ಮದಲ್ಲಿ ಒಂದೇ ಜಾತಿಗೆ ಸೀಮಿತವಾಗಿಲ್ಲ. ಹಿಂದು ಸಂಸ್ಕೃತಿ ಹಾಳು ಮಾಡಲು ಬಿಜೆಪಿಗರು ಹೊರಟಿದ್ದಾರೆ. ರೈತರ ಮಕ್ಕಳು, ಬಡವರ ಮಕ್ಕಳು ಉನ್ನತ ಹುದ್ದೆಗೆ ಹೋಗಲು ಕಾಂಗ್ರೆಸ್‌ಗೆ ಮತ ಹಾಕಬೇಕಾಗಿದೆ ಎಂದು ಅಂಜಲಿ‌ ನಿಂಬಾಳ್ಕರ್ ಹೇಳಿದರು.

ಇದನ್ನೂ ವೀಕ್ಷಿಸಿ: