Amit Shah: ಹಳೇ ಮೈಸೂರು ಭಾಗವೇ ಟಾರ್ಗೆಟ್..ಹೇಗಿದೆ ಗೊತ್ತಾ ಶಾ ಗೇಮ್ ಪ್ಲ್ಯಾನ್..?
ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಸಿದ್ಧತೆ
ಸಿದ್ಧತೆ ನಡುವೆಯೇ ಚುನಾವಣೆ ಚಾಣಾಕ್ಯ ಎಂಟ್ರಿ
ಫೆ. 10 ಮತ್ತು 11 ರಂದು ಅಮಿತ್ ಶಾ ರಾಜ್ಯಕ್ಕೆ
ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡ ಬಳಿಕ ಮೊದಲ ಬಾರಿ ರಾಜ್ಯಕ್ಕೆ ಅಮಿತ್ ಶಾ(Amit Shah) ಬರುತ್ತಿದ್ದಾರೆ. ಫೆಬ್ರವರಿ 10ರಂದು ದಾವಣಗೆರೆ(Davanagere), ಮೈಸೂರಿಗೆ(Mysore) ಭೇಟಿ ನೀಡಲಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ(Karnataka) ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ(BJP) ಈಗಾಗಲೇ ಪ್ಲ್ಯಾನ್ ಮಾಡುತ್ತಿದೆ. ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಬಳಿಕ ದಾವಣಗೆರೆಯ ಕಾರ್ಯಕ್ರಮದಲ್ಲೂ ಅಮಿತ್ ಶಾ ಇರಲಿದ್ದಾರೆ. ಬಿಜೆಪಿ-ಜೆಡಿಎಸ್(JDS) ಮೈತ್ರಿ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿ ಮಹತ್ವ ಪಡೆದಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಬಿಜೆಪಿ 25 ಸ್ಥಾನ ಗೆದ್ದಿತ್ತು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ. ಹೀಗಾಗಿ ಪ್ರಭಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಆದರೆ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲದಂತೆ ತಡೆಯಲು ಬಿಜೆಪಿ ತಂತ್ರ ರೂಪಿಸುತ್ತಿದೆ.
ಇದನ್ನೂ ವೀಕ್ಷಿಸಿ: ಜ್ಞಾನವಾಪಿ ಮಸೀದಿಯಲ್ಲಿ ಅಕ್ಬರ್ ಭಾವೈಕ್ಯತೆಗಾಗಿ ಶಿವಲಿಂಗ ಇಟ್ಟಿದ್ನಾ!? ಮಂದಿರ ಒಡೆದು ಮಸೀದಿ ಕಟ್ಟಲಾಯ್ತಾ ?