ಬೀದರ್‌ನಲ್ಲಿ ಕಮಲ ಅರಳಿಸಲು ರಣತಂತ್ರ: 6 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಶಾ

ಬೀದರ್‌ ಮೇಲೆ ಅಮಿತ್‌ ಶಾ ಕಣ್ಣು
6 ಕ್ಷೇತ್ರಗಳ ಗೆಲುವಿಗೆ ಶಾ ರಣತಂತ್ರ
ಗೆಲ್ಲುವ ವಿಶ್ವಾಸದಲ್ಲಿ ಪ್ರಭು ಚವ್ಹಾಣ್‌

First Published Apr 22, 2023, 11:29 AM IST | Last Updated Apr 22, 2023, 11:29 AM IST

ಬೀದರ್‌: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೇ ಆರಂಭವಾಗಿದ್ದು, ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಿವೆ. ಬೀದರ್‌ನಲ್ಲಿ ಚುನಾವಣಾ ಕಾವು ಜೋರಾಗಿದ್ದು, ಜಿಲ್ಲೆಯ ಆರು ಕ್ಷೇತ್ರಗಳ ಮೇಲೆ ಅಮಿತ್‌ ಶಾ ಕಣ್ಣಿಟ್ಟಂತೆ ಕಾಣುತ್ತಿದೆ. ಈ ಸಂಬಂಧ ಸಚಿವ ಪ್ರಭು ಚವ್ಹಾಣ್‌ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಭಿವೃದ್ದಿ ಕೆಲಸದ ಆಧಾರದ ಮೇಲೆ ನಾವು ಜನರ ಮುಂದೆ ಹೋಗುತ್ತಿದ್ದೇವೆ. ಎಲ್ಲಾ ಕಡೆ  ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಜನ ನನ್ನ ಕೆಲಸ ನೋಡಿ ನನ್ನನ್ನು ಗೆಲ್ಲಿಸಲಿದ್ದಾರೆ. ಈ ಬಾರಿ ಬೀದರ್‌ನಲ್ಲಿ ಕಾಂಗ್ರೆಸ್‌ ಸೋಲಲಿದೆ ಎಂದು ಅವರು ಭವಿಷ್ಯ ನುಡಿದ್ದಾರೆ.

ಇದನ್ನೂ ವೀಕ್ಷಿಸಿ: ರಾಜ್ಯಕ್ಕೆ ರಾಹುಲ್‌ ಗಾಂಧಿ ಆಗಮನ: ಲಿಂಗಾಯತ ಮತಕ್ಕಾಗಿ 'ಕೈ' ಹೊಸ ತಂತ್ರ