Asianet Suvarna News Asianet Suvarna News

ಹೊಡೆದಾಟಕ್ಕೆ ಮುಂದಾದ ಶಾಸಕ-ಸಚಿವ: ಬಿಜೆಪಿಯ ಒಳಜಗಳ ವಿಧಾನಸೌಧದಲ್ಲಿ ಬಹಿರಂಗ

ರಾಜ್ಯದ ಬಿಜೆಪಿ ನಾಯಕರ ಒಳಜಗಳ ಇಂದು ವಿಧಾನಸೌಧದಲ್ಲೇ ಸ್ಪೋಟವಾಗಿದೆ. ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಎದುರುಗಡೆಯೇ ಬಿಜೆಪಿ ನಾಯಕರ ಗಲಾಟೆ ಮಾಡಿಕೊಂಡ ಪ್ರಸಂಗ ನಡೆದಿದೆ.

ಬೆಂಗಳೂರು, (ಸೆ.21): ರಾಜ್ಯದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ  ಬಿಜೆಪಿ ಶಾಸಕ-ಸಚಿವರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

ಸಚಿವ - ಸಂಸದರ ನಡುವೆ ಗುದ್ದಾಟ : ಬಿಜೆಪಿಗರ ಶೀತಲ ಸಮರ

ರಾಜ್ಯದ ಬಿಜೆಪಿ ನಾಯಕರ ಒಳಜಗಳ ಇಂದು (ಸೋಮವಾರ) ವಿಧಾನಸೌಧದಲ್ಲೇ ಸ್ಪೋಟವಾಗಿದೆ. ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಎದುರುಗಡೆಯೇ ಬಿಜೆಪಿ ನಾಯಕರ ಗಲಾಟೆ ಮಾಡಿಕೊಂಡ ಪ್ರಸಂಗ ನಡೆದಿದೆ.

Video Top Stories