Asianet Suvarna News Asianet Suvarna News

IMA ವಂಚಕ ಮನ್ಸೂರ್ ಖಾನ್‌ನಿಂದ ದುಡ್ಡು ಪಡೆದ್ರಾ ಸಿದ್ದು- ಎಚ್‌ಡಿಕೆ.?

Feb 21, 2021, 4:10 PM IST

ಬೆಂಗಳೂರು (ಫೆ. 21): ಐಎಂಎ ಮಾಲಿಕ ಮನ್ಸೂರ್ ಅಲಿ ಖಾನ್ ಆಪ್ತ ನಿಜಾಮುದ್ದೀನ್ ತಪ್ಪೊಪ್ಪಿಗೆ ನೀಡಿದ್ದು, ಅದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ನಾಡಿನ ಹಲವು ಪ್ರಮುಖ ರಾಜಕೀಯ ನಾಯಕರ ಹೆಸರು ಕೇಳಿ ಬಂದಿದೆ.  

ಪಂಚರಾಜ್ಯಗಳಲ್ಲಿ ಕೊರೊನಾ ಅಟ್ಟಹಾಸ: ಕರ್ನಾಟಕದ ಮುಂದಿದೆ ಮಹಾ ಸವಾಲು

2018ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎಲೆಕ್ಷನ್‌ ಫಂಡಿಂಗ್‌ ಹೆಸರಿನಲ್ಲಿ ಮನ್ಸೂರ್‌ನಿಂದ ರಾಜಕಾರಣಿಗಳು ಹಣ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ. ರಿಚ್ಮಂಡ್‌ ಟೌನ್‌ ಸಮೀಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನಿಗೆ .5 ಕೋಟಿ ನೀಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮಾಜಿ ಸಚಿವ ರೋಷನ್‌ ಬೇಗ್‌ ಆಪ್ತ ಸಹಾಯಕ ಕೃಷ್ಣೇಗೌಡ ಮೂಲಕ ಹಣ ಪಡೆದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.