Asianet Suvarna News Asianet Suvarna News

ಡಿಸಿಎಂ ದಂಗಲ್‌ಗೆ ಬ್ರೇಕ್ ಹಾಕುತ್ತಾ ಹೈಕಮಾಂಡ್? ಪಟ್ಟು ಬಿಡದ ನಾಯಕರ ಬೇಡಿಕೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?

ಅಹಿಂದ ಸಚಿವರ ತಂಡದ ಹಿಂದಿರುವ ಶಕ್ತಿ ಯಾವುದು..?
ದೆಹಲಿ ಭೇಟಿಗೆ ಮುಂದಾದ ಸಚಿವರು ಸಕ್ಸಸ್ ಆಗುತ್ತಾರಾ..?
ಕುತೂಹಲ ಮೂಡಿಸಿದ ಅಹಿಂದ ಸಚಿವರ ದೆಹಲಿ ದಂಡಯಾತ್ರೆ

ರಾಜ್ಯದಲ್ಲಿ ಡಿಸಿಎಂ ಹುದ್ದೆಗೆ ಪೈಪೋಟಿ ಜೋರಾಗಿದೆ. ಡಿಸಿಎಂ ಪಟ್ಟಕ್ಕಾಗಿ(DCM post) ಪೈಪೋಟಿ ಮಾಡ್ತಿರೋರಿಗೆ ಕಾಂಗ್ರೆಸ್ ಹೈಕಮಾಂಡ್‌(Congress High Command) ಮಣೆ ಹಾಕುತ್ತಾ ಎಂದು ಕಾದು ನೋಡಬೇಕಿದೆ. ಈ ವಾರವೇ ಹೈಕಮಾಂಡ್ ಭೇಟಿಗೆ ಒಂದು ಬಣ ಮುಂದಾಗಿದ್ದು, ಡಿಸಿಎಂಗಾಗಿ ಅಹಿಂದ ನಾಯಕರು ದೆಹಲಿಗೆ(Delhi) ಹೋಗಲಿದ್ದಾರೆ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದೆ. ಜೂನ್ 27 ಅಥವಾ 28ರಂದು ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ಖರ್ಗೆ, ಸೋನಿಯಾ, ರಾಹುಲ್ ಗಾಂಧಿ ಭೇಟಿ ಮಾಡಿ, ಸಮುದಾಯಕ್ಕೊಂದು ಡಿಸಿಎಂ ಸ್ಥಾನ ನೀಡುವ ಅಗತ್ಯತೆ ಬಗ್ಗೆ ಚರ್ಚೆ ಮಾಡಲಿದ್ದಾರೆ. 

ಇದನ್ನೂ ವೀಕ್ಷಿಸಿ:  ಲೋಕಸಭಾ ರಿಸಲ್ಟ್ ಬೆನ್ನಲ್ಲೇ ಬಿಜೆಪಿಯಲ್ಲಿ ಶೀತಲ ಸಮರ ? ಲಿಂಗಾಯತ ಲೀಡರ್‌ಶಿಪ್‌ಗೆ ನಡೆಯುತ್ತಿದ್ಯಾ ಪೈಪೋಟಿ ?

Video Top Stories