ಸಿದ್ದರಾಮಯ್ಯ ಪರ ತಾರೆಯರ ಹಿಂಡು: ಶಿವರಾಜ್‌ ಕುಮಾರ್ ನೋಡಲು ಅಭಿಮಾನಿಗಳ ದಂಡು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಲು ವರುಣ ಕ್ಷೇತ್ರದಲ್ಲಿಂದು ತಾರೆಯರ ಹಿಂಡೇ ಆಗಮಿಸಿದೆ.

First Published May 4, 2023, 10:43 PM IST | Last Updated May 4, 2023, 10:43 PM IST

ಮೈಸೂರು  (ಮೇ.04):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಲು ವರುಣ ಕ್ಷೇತ್ರದಲ್ಲಿಂದು ತಾರೆಯರ ಹಿಂಡೇ ಆಗಮಿಸಿದೆ. ವರುಣಾದಲ್ಲಿ ಸಿದ್ದರಾಮಯ್ಯ ಎರಡನೇ ಸುತ್ತಿನ ಮತ ಭೇಟೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮತಯಾಚನೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಸಿದ್ದರಾಮಯ್ಯಗೆ ಸ್ಯಾಂಡಲ್‌ವುಡ್ ನಟ ನಟಿಯರ ಸಾಥ್ ಸಿಕ್ಕಿದೆ. ಡಾ. ಶಿವರಾಜ್ ಕುಮಾರ್, ರಮ್ಯಾ, ದುನಿಯಾ ವಿಜಯ್ ಸೇರಿದಂತೆ ಸ್ಟಾರ್ ಕ್ಯಾಂಪೇನ್ ಶುರುವಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ, ಮಧು ಬಂಗಾರಪ್ಪ, ಜಮೀರ್ ಅಹ್ಮದ್ ಖಾನ್, ಗೀತಾ ಶಿವಕುಮಾರ್ ಕೂಡ ಭಾಗಿಯಾಗಿದ್ದಾರೆ. ಇಂದು ಬೆಳಗ್ಗೆ ಬೆಳಗ್ಗೆ ರಾಂಪುರ, ಗೊದ್ದನಪುರ, ಮರಳೂರು, ತಾಂಡವಪುರದಲ್ಲಿ ಮತಯಾಚನೆ ಮಾಡಿದರು. ಮಧ್ಯಾಹ್ನ ಕೆಂಪಿಸಿದ್ದನಹುಂಡಿ, ಹುಳಿಮಾವು, ಹದಿನಾರು, ಹೊಸಕೋಟೆಯಲ್ಲಿ ಹಾಗೂ ಸಂಜೆ ಸುತ್ತೂರು, ಬಿಳಿಗೆರೆ, ನಗರ್ಲೆ, ಮಲ್ಲೂಪುರದಲ್ಲಿ ಪ್ರಚಾರ ಮಾಡಿದರು.

ಪ್ರಚಾರದ ವೇಳೆ ನಾನೆಂದು ನಿಮ್ಮವನು, ನಿಮಗಾಗಿ ಬಂದವನು ಎಂದು ಸಿಂಹದ ಮರಿ ಹಾಡಿನ ಮೂಲಕ  ಶಿವಣ್ಣ ಮತಯಾಚನೆ ಮಾಡಿದರು. ತಾಂಡವಪುರ ಗ್ರಾಮದಲ್ಲಿ ಹಾಡು ಹಾಡಿದ ಶಿವಣ್ಣ, ಸಿದ್ದರಾಮಯ್ಯ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಹೇಳುವುದು ಬೇಡ ಎಲ್ಲ ನಿಮಗೇ ಗೊತ್ತಿದೆ. ಅಪ್ಪಾಜಿ ಯಾವಾಗಲೂ ನಮ್ಮ ಕಾಡಿನವರು ಅನ್ನುತ್ತಿದ್ದರು. ಅಪ್ಪಾಜಿ, ನಮ್ಮ ಜತೆ ಸಿದ್ದರಾಮಯ್ಯ ಅವರಿಗೆ ತುಂಬಾ ಒಡನಾಟ ಇದೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಎಂದು ಮತಯಾಚನೆ ಮಾಡಿದರು. ಇನ್ನು ಶಿವರಾಜ್‌ ಕುಮಾರ್‌ ಅವರನ್ನು ನೋಡಲು ಅಭಿಮಾನಿಗಳ ದಂಡೇ ಸೇರಿತ್ತು.

Video Top Stories