Pancharatna Rathayatre: ರಾಜ್ಯದ 6 ಕೋಟಿ ಜನರೇ ನಮ್ಮ ಕಾರ್ಯಕರ್ತರು ಕುಮಾರಸ್ವಾಮಿ

ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದ 6 ಕೋಟಿ ಜನತೆಯೇ ನಮ್ಮ ಕಾರ್ಯಕರ್ತರು, ಅವರೇ ನಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಚಿಕ್ಕಬಳ್ಳಾಪುರ (ನ.26): ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಲ್ಕನೇ ದಿನದ ಪಂಚರತ್ನ ರಥಯಾತ್ರೆ ನಡೆಯುತ್ತಿದೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆಯುತ್ತಿರುವ ರಥಯಾತ್ರೆಯು ನಡೆಯುತ್ತಿದ್ದು, ಇಲ್ಲಿನ ಎಲ್ಲ ಮುಂಬರುವ ಚುನಾವಣೆ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಹಲವು ಸಮಸ್ಯೆಗಳು ತಾಂಡವಾಡುತ್ತಿದ್ದು, ಎಲ್ಲ ಸಮಸ್ಯೆಗೆ ಜೆಡಿಎಸ್‌ ಸರ್ಕಾರ ಪರಿಹಾರ ಕಲ್ಪಿಸಲಿದೆ. ನಮ್ಮ ರಾಜ್ಯದ 6 ಕೋಟಿ ಜನತೆಯೇ ನಮ್ಮ ಕಾರ್ಯಕರ್ತರು, ಅವರೇ ನಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಬಾರಿ ಗೌರಿಬಿದನೂರು ಕ್ಷೇತ್ರದಲ್ಲಿ ಕೆಲವೇ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ನರಸಿಂಹಮೂರ್ತಿ ಸೋತಿದ್ದರು. ಬೆಂಗಳೂರಿನಿಂದ ಕೆಲವರು ಹಣ ಇಟ್ಟುಕೊಂಡು ಬಂದು ಚುನಾವಣೆ ವೇಳೆ ಹಣವನ್ನು ಚೆಲ್ಲಿ ಗದ್ದು ನಂತರ ಈ ಕಡೆಗೆ ಮುಖ ಮಾಡದೇ ಹೋಗುತ್ತಿದ್ದಾರೆ. ಈ ಬಾರಿ ಜನರ ಆಶೀರ್ವಾದದೊಂದಿಗೆ ವಿಜಯಶಾಲಿ ಆಗಲಿದ್ದಾರೆ. ಜೆಡಿಎಸ್‌ನಿಂದ ಯಾವುದೇ ತಂತ್ರ ಮತ್ತು ಕುತಂತ್ರವನ್ನು ಮಾಡದೇ ಜನರ ಬಳಿಯೇ ಹೋಗಿ ಕೆಲಸ ಮಾಡುತ್ತೇವೆ. 

Related Video