Asianet Suvarna News Asianet Suvarna News

ನಾಲ್ಕು ರಾಜ್ಯಗಳ ಫಲಿತಾಂಶದಿಂದ ಕರ್ನಾಟಕಕ್ಕೆ ಸಂದೇಶ ಏನು..? ವಿಧಾನಸಭೆ ಸೋತ ಬಿಜೆಪಿ ಲೋಕಸಭೆ ಗೆಲ್ಲುತ್ತಾ..?

6 ತಿಂಗಳ ಹಿಂದೆ ಕರ್ನಾಟಕದಲ್ಲಿ ಸೋತು-ಗೆದ್ದವರಿಗೆ ಮೆಸೇಜ್
ಪ್ರಧಾನಿ ಮೋದಿ ಅಲೆ ಕಡಿಮೆಯಾಗಿಲ್ಲ ಎಂದು ಬಿಜೆಪಿಗೆ ಸಂದೇಶ
ಕರ್ನಾಟಕ ಕಾಂಗ್ರೆಸ್ ‘ಟಾರ್ಗೆಟ್ 20’ ಲೆಕ್ಕಾಚಾರ ಬದಲಾಯ್ತಾ..?

ಕಳೆದ ಆರು ತಿಂಗಳ ಹಿಂದೆ ಕರ್ನಾಟಕದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ(5 State Assembly Election Results) ಭರ್ಜರಿ ಜಯಗೊಳಿಸಿದೆ. ಕಳೆದ ಬಾರಿ ಕರ್ನಾಟಕದಲ್ಲಿ(Karnataka) ಕಾಂಗ್ರೆಸ್(Congress) ಬಳಿಸಿದ್ದ ಅಸ್ತ್ರವನ್ನೇ ಈಗ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ(BJP) ಪ್ರತ್ಯಾಸ್ತ್ರವಾಗಿ ಬಳಸಿದೆ. ಇದರಿಂದ ಮುಂದಿನ ಲೋಕಸಭೆ ಎಲೆಕ್ಷನ್ ಎದುರಿಸಲು ಪ್ರಧಾನಿ ಮೋದಿ ಇಮೇಜ್ ಮತ್ತಷ್ಟು ಗಟ್ಟಿಗೊಂಡಿದೆ. ಇದರಿಂದ ಮೋದಿ ಅಲೆಯ ಅಬ್ಬರ ದೇಶದಲ್ಲಿ ಕಡಿಮೆಯಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೀಗಾಗಿ ಕರ್ನಾಟಕ ವಿಧಾನಸಭೆಯಲ್ಲಿ ಸೋತ ಬಿಜೆಪಿ ಮತ್ತೆ ಲೋಕಸಭೆ ಗೆಲ್ಲುತ್ತದೆ ಎಂದು ಹೇಳಲಾಗ್ತಿದೆ. ಅಲ್ಲದೇ ಕರ್ನಾಟಕ ಕಾಂಗ್ರೆಸ್‌ 'ಟಾರ್ಗೆಟ್‌ 20' ಲೆಕ್ಕಾಚಾರ ಬದಲಾದಂತೆ ಕಾಣುತ್ತದೆ. ಈ ಚುನಾವಣೆ 6 ತಿಂಗಳ ಹಿಂದೆ ಕರ್ನಾಟಕದಲ್ಲಿ ಸೋತು-ಗೆದ್ದವರಿಗೆ ಕೆಲವು ಸಂದೇಶವನ್ನು ನೀಡುತ್ತಿದೆ ಎಂದೇ ಹೇಳಬಹುದು. 

ಇದನ್ನೂ ವೀಕ್ಷಿಸಿ:  ಛತ್ತೀಸ್‌ಗಢ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ ? ಬಿಜೆಪಿಯ ಮಾಸ್ಟರ್‌ಸ್ಟ್ರೋಕ್‌ಗೆ ಕಾಂಗ್ರೆಸ್ ತತ್ತರ !

Video Top Stories