Asianet Suvarna News Asianet Suvarna News

Vidhana Parishad: ಕೋರ್ ಕಮಿಟಿ ಸಭೆಯಲ್ಲಿ ಆಗಿದ್ದೇನು..? ಕೇಂದ್ರದ ನಾಯಕರತ್ತ ಪರಿಷತ್ ಸ್ಥಾನದ ಆಕಾಂಕ್ಷಿಗಳ ಚಿತ್ತ..!

ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಿಂದ ಭಾರೀ ಬೇಡಿಕೆ
ಉತ್ತರ, ಕಲ್ಯಾಣ ಕರ್ನಾಟಕದಿಂದ 20ಕ್ಕೂ ಹೆಚ್ಚು ಆಕಾಂಕ್ಷಿಗಳು
ಯಡಿಯೂರಪ್ಪ ಮೂಲಕ ಪ್ರಬಲ ಒತ್ತಡ ಹೇರಿರುವ ಆಕಾಂಕ್ಷಿಗಳು
 

ವಿಧಾನಪರಿಷತ್(Vidhana Parishad ) ಸ್ಥಾನದ ಕನಸು ಕಾಣ್ತಿದ್ದವರಿಗೆ ಭಾರೀ ನಿರಾಸೆ ಉಂಟಾಗಿದ್ದು, ಕೇಸರಿ(BJP) ಪಡಸಾಲೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಆಕಾಂಕ್ಷಿಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರದ ನಾಯಕರತ್ತ ಪರಿಷತ್ ಸ್ಥಾನದ ಆಕಾಂಕ್ಷಿಗಳ ಚಿತ್ತ ಮೂಡಿದೆ. ಹೆಸರು ಅಂತಿಮಗೊಳಿಸುವ ಜವಾಬ್ದಾರಿಯಿಂದ ರಾಜ್ಯ ನಾಯಕರು ಹಿಂದೆ ಸರಿದಿದ್ದಾರೆ. ಹೈಕಮಾಂಡ್ ಕೊನೆಯ ತೀರ್ಮಾನ ಮಾಡಲಿ ಎಂದು ಕೋರ್ ಕಮಿಟಿ(Core committee meeting) ಸುಮ್ಮನಾಗಿದೆ.  ನೂತನ ಪರಿಷತ್ ಸದಸ್ಯರ ಹೆಸರು ತೀರ್ಮಾನದ ಜವಾಬ್ದಾರಿಯನ್ನು ಕೇಂದ್ರ ನಾಯಕರಿಗೆ ಬಿಡಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಬರೋಬ್ಬರಿ 40 ಆಕಾಂಕ್ಷಿಗಳ ಹೆಸರುಗಳ ಬಗ್ಗೆ ಚರ್ಚೆ ನಡೆದಿದ್ದು, ಭಾರೀ ಲಾಬಿ ನಡೆಸಿರುವ ಹೆಸರುಗಳ ಪಟ್ಟಿ ಕಂಡು ನಾಯಕರು ಗಾಬರಿಯಾಗಿದ್ದಾರೆ. ಸಿಗುವ ಮೂರು ಸ್ಥಾನಕ್ಕೆ 40 ಆಕಾಂಕ್ಷಿಗಳನ್ನು ಕಂಡು ಗಾಬರಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಏನಿದು ಪುರಿ ರತ್ನ ಭಂಡಾರ ವಿವಾದ..! ಓಡಿಶಾದಲ್ಲಿ ವಿ.ಕೆ ಪಾಂಡಿಯನ್ ಟಾರ್ಗೆಟ್ ಮಾಡ್ತಾ ಕೇಸರಿಪಡೆ..?