'ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಕಠಿಣ ಸ್ಥಿತಿ'

* ತುಮಕೂರಿನಿಂದ ಬೆಂಗಳೂರಿನತ್ತ ಸ್ವಾಮೀಜಿಗಳ ಆಗಮನ
* ಸಿಎಂ ಆಗಿರುವಾಗಲೂ ಮಾನಸಿಕ ಕಿರುಕುಳ 
* ಪೂರ್ಣಾವಧಿ ಅಧಿಕಾರ ಮಾಡುವುದಕ್ಕೆ ಬಿಡಿ ಅಂತ ಎಚ್ಚರಿಕೆ ಕೊಟ್ಟ ಶ್ರೀಗಳು
 

First Published Jul 21, 2021, 12:25 PM IST | Last Updated Jul 21, 2021, 1:15 PM IST

ಬೆಂಗಳೂರು(ಜು.21): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿರುದ್ಧ  ಸ್ವಾಮೀಜಿಗಳು ಸಿಡಿದೆದ್ದಿದ್ದಾರೆ. ಇದೀಗ ತುಮಕೂರಿನಿಂದ ಬೆಂಗಳೂರಿನತ್ತ ಸುಮಾರು 20 ಕ್ಕೂ ಹೆಚ್ಚು ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ. ಸ್ವಾಮೀಜಿಗಳು ಸಿಎಂ ಬೆನ್ನಿಗೆ ನಿಂತಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಕಠಿಣ ಸ್ಥಿತಿ ಎದುರಾಗಲಿದೆ ಅಂತ ಸ್ವಾಮೀಜಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಸಿಎಂ ಆಗಿರುವಾಗಲೂ ಮಾನಸಿಕ ಕಿರುಕುಳ ಕೊಡಲಾಗುತ್ತಿದೆ. ಪೂರ್ಣಾವಧಿ ಅಧಿಕಾರ ಮಾಡುವುದಕ್ಕೆ ಬಿಡಿ ಅಂತ ಹೈಕಮಾಂಡ್‌ಗೆ ಶ್ರೀಗಳು ಎಚ್ಚರಿಕೆ ಕೊಟ್ಟಿದ್ದಾರೆ.

ಬಿಜೆಪಿ ಶಾಸಕಾಂಗ ಸಭೆ ದಿಢೀರ್‌ ರದ್ದು: ರಾಜೀನಾಮೆ ಕೊಡಲ್ವಾ ಸಿಎಂ?