
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಮೋದಿ ಅಧ್ಯಕ್ಷತೆಯಲ್ಲಿ ಮಂತ್ರಿ ಪರಿಷತ್ ಸಭೆ!
ಶೀಘ್ರದಲ್ಲೇ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ, ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ನಷ್ಟ, ಸದನದಲ್ಲಿ 2 ನಿರ್ಣಯ ಮಂಡಿಸಿದ ಸರ್ಕಾರ, ದೇವಸ್ಥಾನದ ಹುಂಡಿ ಮೇಲೆ ಸರ್ಕಾರದ ಕಣ್ಣು, ದಾರ್ಮಿಕ ದತ್ತಿ ತಿದ್ದುಪಡಿಗೆ ಬಿಜೆಪಿ ವಿರೋಧ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಲೋಕಸಭಾ ಚುನಾವಣಾ ದಿನಾಂಕ ಕೆಲವೇ ದಿನದಲ್ಲಿ ಘೋಷಣೆಯಾಗಲಿದೆ. ಇದೀಗ ಮಾರ್ಚ್ 3 ರಂದು ಬಿಜೆಪಿ ಮಂತ್ರಿ ಪರಿಷತ್ ಸಭೆ ಕರೆಯಲಾಗಿದೆ. ಕಳೆದ 10 ವರ್ಷದಲ್ಲಿನ ಪ್ರತಿ ವಿಭಾಗದ ಸಾಧನೆಗಳು ವರದಿ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಲಿದೆ. ಈ ಸಭೆಯ ಬಳಿಕ ಯಾವುದೇ ಕ್ಷಣದಲ್ಲಿ ಚುನಾವಣಾ ಆಯೋಗ ಲೋಕಸಭಾ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ. 2009ರಲ್ಲಿ ಮಾರ್ಚ್ 2ಕ್ಕೆ ಚುನಾವಣೆ ಘೋಷಣೆ ಮಾಡಲಾಗಿತ್ತು. ಇನ್ನು 2014ರಲ್ಲಿ ಮಾರ್ಚ್ 5 ಹಾಗೂ 2019ರಲ್ಲಿ ಮಾರ್ಚ್ 10ಕ್ಕೆ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿತ್ತು. ಈ ಬಾರಿ ಮಾರ್ಚ್ ಮೊದಲ ವಾರ ಅಥವಾ ಎರಡನೇ ವಾರದ ಆರಂಭದಲ್ಲೇ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ