Asianet Suvarna News Asianet Suvarna News

ನಾಲ್ಕು ಮಕ್ಕಳಿದ್ದರೂ ಪೂಜಾರಿ ಮಗಳ ಜೊತೆ ಲವ್..! ಅವನನ್ನ ಮುಗಿಸಲು ಇಡೀ ಕುಟುಂಬವೇ ಒಂದಾಗಿತ್ತು..!

ಬೇಡ ಬೇಡ ಅಂದರೂ ಹಿಂದೆ ಬಿದ್ದು ಪ್ರೀತಿ ಮಾಡ್ತಿದ್ದ!
ಅವನ ಮೆಸೆಜ್ಗಳನ್ನ ಅವಳು ಗಂಡನಿಗೆ ತೋರಿಸಿದ್ಲು..!
ಅವನ ಕಥೆ ಮುಗಿಸಿ ಹಂತಕರು ಪೊಲೀಸ್ ಠಾಣೆಗೆ ಬಂದ್ರು!

ಅವನು ಕ್ರೂಸರ್ ಡ್ರೈವರ್. ಹೆಂಡತಿ ಮತ್ತು ನಾಲ್ಕು ಮಕ್ಕಳ ಜೊತೆ ನೆಮ್ಮದಿಯಾಗಿ ಜೀವನ ಮಾಡ್ತಿದ್ದ. ಆದ್ರೆ ಆವತ್ತು ಕೆಲಸ ಇದೆ ಅಂತ ಮನೆಬಿಟ್ಟು ಹೋದವನು ಊರಿನ ಹೊರಗೆ ಹೆಣವಾಗಿ ಪತ್ತೆಯಾಗಿದ್ದ.ಅವನನ್ನ ಹಂತಕರು ಬರ್ಬರವಾಗಿ ಕೊಂದು(Murder) ಮುಗಿಸಿದ್ರು..ಅವನ ಕಣ್ಣು ಗುಡ್ಡೆಗಳು ಹೊರಬಂದಿದ್ವು..ಇನ್ನೂ ಭೀಕರ ಕೊಲೆಯ ಹಿಂದೆ ಬಿದ್ದ ಪೊಲೀಸರಿಗೆ(Police) ಸಿಕ್ಕಿದ್ದು ಒಂದು ಲವ್ ಸ್ಟೋರಿ. ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡ್ತಿದ್ದ ಕುಟುಂಬ ಮುಸ್ಲಿಂ ಯುವಕನನ್ನ(Muslim Youth) ಕೊಂದು ಮುಗಿಸಿತ್ತು. ಅಷ್ಟೇ ಅಲ್ಲ ಅವನ ಹೆಣ ಹಾಕಿ ಸೀದಾ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ರು. ಇನ್ನೂ ಯಾಕ್ರಪ್ಪ ಕೊಂದೆ ಅಂದಾಗ ಅವರು ಪಾಷಾ ಮಾಡಿದ ಒಂದು ಯಡವಟ್ಟಿನ ಬಗ್ಗೆ ಹೆಳಿದ್ರು. ಮನೆಯಲ್ಲಿ ಹೆಂಡತಿ ಮಕ್ಕಳಿದ್ರೂ ಪಾಷಾ, ಆಂಜನನೇಯ ದೇವಸ್ಥಾನದ ಪೂಜಾರಿಯ ಮಗಳ ಮೇಲೆ ಕಣ್ಣು ಹಾಕಿದ್ದ. ಆಕೆ ನಿತ್ಯ ಕೆಲಸಕ್ಕೆ ಹೋಗುವಾಗ ಆಕೆಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ. ಒಮ್ಮೆ ಆಕೆಯ ಕುಟುಂಬಕ್ಕೂ ಅವನಿಗೆ ವಾರ್ನ್ ಮಾಡಿತ್ತು. ನಂತರ ಆಕೆಗೂ ಮದುವೆ ಮಾಡಿ ಮಗಳನ್ನ ಬೆಂಗಳೂರಿಗೆ(bengaluru) ಕಳಿಸಿದ್ರು. ಆದ್ರೆ ಆಗಲೂ ಸುಮ್ಮನ್ನಾಗದ ಪಾಷಾ ಅವಳ ನಂಬರ್ ಕಲೆಕ್ಟ್ ಮಾಡಿ ನಿತ್ಯ ಕಾಲು, ಮೆಸೆಜ್ ಮಾಡಿ ಕಾಟ ಕೊಡ್ತಿದ್ದ. ಇನ್ನೂ ನೋಡೋ ವರೆಗೂ ನೋಡಿದ ಹೆಂಡತಿ ಒಂದು ದಿನ ಗಂಡನಿಗೆ ವಿಷಯ ಹೇಳಿದ್ಲು. ಅಷ್ಟೇ ಹೆಂಡತಿ ಮೇಲೆ ಕಣ್ಣು ಹಾಕಿದವನಿಗೆ ಒಂದು ಗತಿ ಕಾಣಿಸಬೇಕು ಅಂತ ಗಂಡ ಬೆಂಗಳೂರಿನಿಂದ ಹೊರಟ. ಗ್ರಾಮಕ್ಕೆ ಬಂದು ಬಾಮೈದುನರ ಜೊತೆ ಸೇರಿ ಒಂದು ಸ್ಕೆಚ್ ರೆಡಿ ಮಾಡೇ ಬಿಟ್ಟ. ತಾನು ಮಾಡಿದ ತಪ್ಪಿನಿಂದಾಗಿ ಆತನನ್ನ ನಂಬಿಕೊಂಡ ಪತ್ನಿ, ಮಕ್ಕಳು ಹಾಗೂ ತಂದೆ-ತಾಯಿ ಕಂಗಾಲಾಗಿದ್ದಾರೆ. ಇತ್ತ ಪತ್ನಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾನೆ ಎಂದು ಕೋಪಗೊಂಡು ಮೆಸೇಜ್ ಮಾಡಿದವನ ಜೀವವೇ ತೆಗೆದು ಜೈಲು ಸೇರಿದ್ದಾನೆ.

ಇದನ್ನೂ ವೀಕ್ಷಿಸಿ:  ಯಾರ ಕೈ ಹಿಡಿತಾರೆ ಹಾಸನ ಮತದಾರ ? ಜೆಡಿಎಸ್‌ಗೆ ಭಾರೀ ಪೈಪೋಟಿ ನೀಡ್ತಿರುವ ಕಾಂಗ್ರೆಸ್‌!

Video Top Stories