ವೇಣುಗೋಪಾಲ್ ಜಯಚಂದ್ರ 41ನೇ ವಯಸ್ಸಲ್ಲಿ ಪ್ಯಾರ ಅಥ್ಲೀಟ್‌ ಆಗಿದ್ದು ಹೇಗೆ ?

ಪ್ಯಾರಾ ಅಥ್ಲೀಟ್ ವೇಣುಗೋಪಾಲ್ ಜಯಚಂದ್ರ ಅವರು ಕ್ಯಾನ್ಸರ್‌ಗೆ ಹೇಗೆ ತುತ್ತಾದರು ಹಾಗೂ ಪ್ಯಾರಾ ಅಥ್ಲೀಟ್‌ ಆಗಿದ್ದು ಹೇಗೆ ಎಂಬ ಹಲವಾರು ವಿಷಯಗಳ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
 

First Published Oct 29, 2023, 2:05 PM IST | Last Updated Oct 29, 2023, 2:05 PM IST

ವೇಣುಗೋಪಾಲ್ ಜಯಚಂದ್ರ (Venugopal Jayachandra) ಪ್ಯಾರಾ ಅಥ್ಲೀಟ್ ಆಗಿದ್ದು, ಅವರು 2016ರಲ್ಲಿ ಕ್ಯಾನ್ಸರ್‌ಗೆ(Cancer) ತುತ್ತಾದರು. 2018 ರ ಏಷ್ಯನ್ ಗೇಮ್ಸ್‌ನಲ್ಲಿ(Asian Games)  ದೇಶವನ್ನು ಪ್ರತಿನಿಧಿಸಿದವರು. ಕ್ಯಾನ್ಸರ್‌ಗೆ ತುತ್ತಾದ ಸಮಯದಲ್ಲಿ ಅವರು ತುಂಬಾ ಸಂಕಷ್ಟದಲ್ಲಿದ್ದು, ಊತವನ್ನು ಕಡಿಮೆ ಮಾಡಲು ಒಂದು ತಿಂಗಳ ಸಮಯ ತೆಗೆದುಕೊಳ್ಳಲಾಯಿತು. ನಂತರ ಆಪರೇಷನ್‌ನನ್ನು ಮಾಡಲಾಯಿತು. ಬಳಿಕ ಅವರ ಕಾಲಿನಲ್ಲಿ ಸ್ವಾಧೀನವೇ ಇರಲಿಲ್ಲ. ಬಳಿಕ ಮತ್ತೆರಡು ಆಪರೇಷನ್ ಮಾಡುತ್ತಾರೆ. ಆದ್ರೆ ಇದು ಗ್ಯಾಂಗ್ರೀನ್‌ಗೆ ತಿರುಗಿದೆ. ಹಾಗಾಗಿ ಕಾಲನ್ನು ತೆಗೆಯಬೇಕು ಎನ್ನುತ್ತಾರೆ. ಈ ರೀತಿಯಾಗಿ ಅವರು ಕ್ಯಾನ್ಸರ್‌ನಿಂದ ಕಾಲನ್ನು ಕಳೆದುಕೊಳ್ಳುತ್ತಾರೆ.ನನ್ನ ಮಗಳು ಬಳಿಕ ಅಪ್ಪ ಅಳಬೇಡ ನಾನು ನಿನ್ನ ಕಾಲಾಗಿ ಇರುತ್ತೇನೆ ಎಂದಳು. ಬಳಿಕ ಪ್ಯಾರಾ ಒಲಪಿಂಕ್‌ಗೆ ಪಾದಾರ್ಪಣೆ ಮಾಡಿ, ದೇಶವನ್ನು ಪ್ರತಿನಿಧಿಸಿದರು. 

ಇದನ್ನೂ ವೀಕ್ಷಿಸಿ:  ಮಕ್ಕಳ ಆಹಾರ ಕ್ರಮ ಹೇಗಿರಬೇಕು? ಅವರ ಬುದ್ಧಿಶಕ್ತಿಗೆ ಅಗತ್ಯವಾದ ಆಹಾರ ಪದ್ಧತಿ ಯಾವುದು ?