ಭಾರತೀಯ ವಾಯುಪಡೆಗೆ @90: ಏರ್‌ ಕಮಾಡೋರ್‌ ರತ್ನೇಶ್‌ ಗುಪ್ತಾ ವಿಶೇಷ ಸಂದರ್ಶನ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪಾಡ್‌ಕಾಸ್ಟ್‌ನಲ್ಲಿ ಏರ್‌ ಕಮಾಡೋರ್‌ ರತ್ನೇಶ್‌ ಗುಪ್ತಾ ಮಾತನಾಡಿದ್ದು, ವಾಯು ಪಡೆಯ ಹಲವಾರು ವಿಷಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
 

First Published Oct 9, 2023, 4:00 PM IST | Last Updated Oct 9, 2023, 4:00 PM IST

ಭಾರತೀಯ ವಾಯುಪಡೆಗೆ 90 ವರ್ಷಗಳ ಗ್ಲೋರಿ ಇದೆ. ಇಂಡಿಯನ್ ಏರ್‌ ಫೋರ್ಸ್‌ 91ನೇ ವಾರ್ಷಿಕೋತ್ಸವದ ಆಚರಣೆಯಲ್ಲಿದೆ. ಇಂತಹ ಸಂದರ್ಭದಲ್ಲಿ ಅದರ ಸಾಧನೆ ಏfನು ? ಹಾಗೂ ಅಲ್ಲಿಗೆ ಸೇರಲು ಯಾವ ರೀತಿಯ ತರಬೇತಿ ಪಡೆಯಬೇಕು ಎಂಬ ಹಲವಾರು ವಿಷಯಗಳ ಬಗ್ಗೆ ಇಂದಿನ ಪಾಡ್‌ಕಾಸ್ಟ್‌ನಲ್ಲಿ ಏರ್‌ ಕಮಾಡೋರ್‌ ರತ್ನೇಶ್‌ ಗುಪ್ತಾ (Air Commodorer Ratnesh Gupta) ಮಾತನಾಡಿದ್ದಾರೆ. ಮೊದಲು ಏರ್‌ ಫೋರ್ಸ್‌ ಆರಂಭವಾದಾಗ ಕೇವಲ ನಾಲ್ಕು ಏರ್‌ಕ್ರಾಫ್ಟ್‌ಗಳು ಮಾತ್ರ ಇದ್ದವು. ಆದ್ರೆ ಈಗ ನಾವು ಏರ್‌ ಫೋರ್ಸ್‌ನಲ್ಲಿ ವಿಶ್ವದಲ್ಲಿ ನಾಲ್ಕನೇ ಬಲಿಷ್ಠ ರಾಷ್ಟ್ರವಾಗಿದ್ದೇವೆ. ಈಗ ನಾವು ಏರ್‌ಫೋರ್ಸ್‌ನಲ್ಲಿ ಹೊಸ ತಂತ್ರಜ್ಞಾನವನ್ನು ಹೊಂದಿದ್ದೇವೆ ಎಂದು ರತ್ನೇಶ್‌ ಗುಪ್ತಾ ಹೇಳಿದರು. ಏರ್‌ಫೋರ್ಸ್‌ ಆರಂಭವಾಗಿದ್ದು ಅ.8ರಂದು ಆಗ ತುಂಬಾ ಚಿಕ್ಕದಾಗಿತ್ತು. ಆದ್ರೆ ಈಗ ತುಂಬಾ ಬೃಹದಾಕಾರವಾಗಿ ಬೆಳೆದಿದೆ. ಹಾಗಾಗಿ ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 8 ರಂದು ವಾಯುಪಡೆ ದಿನವನ್ನು ಆಚರಣೆ(Indian Air force day) ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ವೀಕ್ಷಿಸಿ:  ಮಕ್ಕಳ ಆಹಾರ ಕ್ರಮ ಹೇಗಿರಬೇಕು? ಅವರ ಬುದ್ಧಿಶಕ್ತಿಗೆ ಅಗತ್ಯವಾದ ಆಹಾರ ಪದ್ಧತಿ ಯಾವುದು ?