Asianet Suvarna News Asianet Suvarna News

ಇದು ಹೃದಯದ ಮಾತು.. ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?

ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪಾಡ್‌ಕಾಸ್ಟ್‌ನಲ್ಲಿ ಅವರು ಮಕ್ಕಳ ಹೃದ್ರೋಗ ತಜ್ಞೆಯೇ ಯಾಕೆ ಆದರು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 
 

ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ  ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಇಲ್ಲಿ ಅವರು ಹೃದಯದ(Heart) ಆರೋಗ್ಯದ ಬಗ್ಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರು ಮಕ್ಕಳ ಹೃದ್ರೋಗ ತಜ್ಞೆ ಆಗಲು ಕಾರಣವೇನು ? ಎಂಬುದನ್ನು ಇಲ್ಲಿ ಹೇಳಿದ್ದಾರೆ. ಡಾ. ವಿಜಯಲಕ್ಷ್ಮೀ(Dr. Vijayalakshmi) ಅವರು ದೆಹಲಿಯ ಎಐಎಂಎಸ್ ಮತ್ತು ಎಸ್ಕಾರ್ಟ್ ಆಸ್ಪತ್ರೆಗೆ ತರಬೇತಿಗೆ ಹೋದರು. ಆದ್ರೆ ಅವರು ಇದರ ಬದಲು ಮಾನಸ ಸರೋವರ, ಕೈಲಾಸ ಪರ್ವತ ಪರಿಕ್ರಮಕ್ಕೆ ಹೋಗಬೇಕಿತ್ತು. ಇಲ್ಲಿಗೆ ಹೋಗಲು ಆಗಲಿಲ್ಲ ಎಂದು ಬೇಸರರಿಂದ ಟ್ರೈನಿಂಗ್‌ಗೆ ಹೋದ್ರಂತೆ. ಆದ್ರೆ ಆ ವರ್ಷ ಕೈಲಾಸ ಪರ್ವತಕ್ಕೆ ಹೋದ ಎಲ್ಲಾರೂ ಭೂ ಸಮಾಧಿ ಆಗಿದ್ದರು. ಹಾಗಾಗಿ ದೇವರು ನನ್ನನ್ನು ಮಕ್ಕಳ ಸೇವೆಗಾಗಿ ಉಳಿಸಿದ್ದಾನೆ ಅಂದುಕೊಂಡು ಬಳಿಕ ಮಕ್ಕಳ ಹೃದ್ರೋಗ ತಜ್ಞೆಯಾಗಲು ಡಾ. ವಿಜಯಲಕ್ಷ್ಮೀ ನಿರ್ಧರಿಸಿ ಅದರತ್ತ ಹೆಚ್ಚು ಪರಿಶ್ರಮವನ್ನು ಹಾಕಿದರು. ಶೇ. 44 ತಾಪಮಾನದಲ್ಲಿ ಒದ್ದೆ ಬಟ್ಟೆ ತಲೆಮೇಲೆ ಹಾಕಿಕೊಂಡು ಭ್ರೂಣದ ಹೃದಯದ ರಕ್ತಚಲನೆ ಹಿಡಿದು ಎಲ್ಲವನ್ನು ಅಭ್ಯಸಿಸಲು ಆರಂಭಿಸಿದರು. 14 ನವೆಂಬರ್ 1998ರಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿ ಮಕ್ಕಳ ಹೃದ್ರೋಗ ವಿಭಾಗ ಸ್ಥಾಪನೆ ಆಯಿತು. ಅಂದಿನಿಂದ ಇಂದಿನವರೆಗೆ 8000ಕ್ಕೂ ಮೇಲ್ಪಟ್ಟು ಮಕ್ಕಳಿಗೆ ಚಿಕಿತ್ಸೆ ಅವರು ಚಿಕಿತ್ಸೆಯನ್ನು ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಭಗವದ್ಗೀತೆ ಯಾಕೆ ಓದಬೇಕು ? ಸಾಮಾನ್ಯ ವ್ಯಕ್ತಿ ಇದರ ಸಾರವನ್ನು ಪಡೆದುಕೊಳ್ಳುವುದು ಹೇಗೆ ?

Video Top Stories