Asianet Suvarna News Asianet Suvarna News

Weekly Horoscope: ಮೇಷ ರಾಶಿಯವರಿಗೆ ಮಾನಸಿಕ ದುರ್ಬಲತೆ ಉಂಟಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

ಈ ವಾರದ 12 ರಾಶಿಗಳ ಭವಿಷ್ಯ ಈ ರೀತಿ ಇದ್ದು, ಮೊದಲಿಗೆ ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಕಲಹ ಉಂಟಾಗಬಹುದು. ಆದ್ರೆ ಬುದ್ಧಿಬಲದಿಂದ ಕಾರ್ಯ ಸಾಧನೆ ಮಾಡಲಿದ್ದೀರಿ. ಮಾನಸಿಕ ದುರ್ಬಲತೆ ಉಂಟಾಗಲಿದ್ದು, ಈ ರಾಶಿಯವರು ದುರ್ಗಾ ಸನ್ನಿಧಾನದಲ್ಲಿ ಬಿಳಿ ಪುಷ್ಪ ಸಮರ್ಪಣೆ ಮಾಡಿ. ಇನ್ನೂ ವೃಷಭ ರಾಶಿಯವರಿಗೆ ಸಹೋದರರ ಸಹಕಾರ ಇರಲಿದೆ. ಆದ್ರೆ ದಾಂಪತ್ಯದಲ್ಲಿ ಕಲಹ ಉಂಟಾಗಲಿದೆ. ಹಿತ ಶತ್ರುಗಳ ಬಾಧೆ, ಮಾನಸಿಕ ಖಿನ್ನತೆ ಉಂಟಾಗಲಿದೆ. ಈ ರಾಶಿಯವರು ದುರ್ಗಾ ಸನ್ನಿಧಾನಕ್ಕೆ ಮೊಸರು ದಾನ ಮಾಡಿ. ಮಿಥುನ ರಾಶಿಯವರಿಗೆ ಮನೆಯ ವಾತಾವರಣದಲ್ಲಿ ಅಶುಚಿ, ಸ್ತ್ರೀಯರಿಗೆ ಹೆಚ್ಚಿನ ಬಲ ಇರಲಿದೆ. ನೀವು ವಿಷ್ಣು ಸನ್ನಿಧಾನದಲ್ಲಿ ಪುಷ್ಪಾರ್ಚನೆ ಮಾಡಿಸಿ.

ಇದನ್ನೂ ವೀಕ್ಷಿಸಿ:  ನಟಿ ಮಹಾಲಕ್ಷ್ಮೀ ನಿಜವಾಗ್ಲೂ ಸನ್ಯಾಸಿ ಆಗಿದ್ರಾ? ಇದ್ದಕ್ಕಿದ್ದಂತೆ ನಟಿ ಸಿನಿಮಾದಿಂದ ಕಣ್ಮರೆ ಆಗಿದ್ದೇಕೆ ?

Video Top Stories