Today Horoscope: ಕುಂಭ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡಲಿದ್ದು,ಇಂದು ಶನೈಶ್ಚರ ಪ್ರಾರ್ಥನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Nov 21, 2023, 8:54 AM IST | Last Updated Nov 21, 2023, 8:54 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಮಂಗಳವಾರ, ನವಮಿ ತಿಥಿ, ಶತಭಿಷ ನಕ್ಷತ್ರ.

ಮಂಗಳವಾರ ನವಮಿ ತಿಥಿ ಬಂದಿರುವುದರಿಂದ ದುರ್ಗೆಯ ಆರಾಧನೆ ಮಾಡಿ. ಸಕಲ ಸಿದ್ಧಿಗಾಗಿ ದೀಪಾರಾಧನೆಯನ್ನು ಮಾಡಿ. ಮೇಷ ರಾಶಿಯವರಿಗೆ ಲಾಭದ ದಿನವಾಗಿದೆ. ತಾಯಿಯ ಮಾರ್ಗದರ್ಶನ ಸಿಗಲಿದೆ. ಸಹೋದರರಲ್ಲಿ ಭಿನ್ನಾಭಿಪ್ರಾಯ ಬರಲಿದ್ದು, ವಿಷ್ಣುಸಹಸ್ರನಾಮವನ್ನು ಪಠಿಸಿ. ಸಿಂಹ ರಾಶಿಯ ವ್ಯಾಪಾರಿಗಳಿಗೆ ಉತ್ತಮ ಫಲವಿದ್ದು, ನಷ್ಟದ ಸಂಭವವೂ ಇದೆ. ದೈವಾನುಕೂಲವಿದ್ದು, ಬಂಧುಗಳ ಸಹಕಾರ ಇರಲಿದೆ. ನಾಗ ದೇವರ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ:  ಬಿಜೆಪಿಗೆ ಮತ ಹಾಕಿದರೆ ಗ್ಯಾರೆಂಟಿ ಯೋಜನೆ ಬಂದ್, ಡಿಕೆ ಶಿವಕುಮಾರ್ ಎಚ್ಚರಿಕೆ!

Video Top Stories