ಬಿಜೆಪಿಗೆ ಮತ ಹಾಕಿದರೆ ಗ್ಯಾರೆಂಟಿ ಯೋಜನೆ ಬಂದ್, ಡಿಕೆ ಶಿವಕುಮಾರ್ ಎಚ್ಚರಿಕೆ!

ಬಿಜೆಪಿಗೆ ಮತ ಹಾಕಿದರೆ ಯೋಜನೆ ಇಲ್ಲದ ಜೀವನ, ಡಿಕೆಶಿ ಎಚ್ಚರಿಕೆ, ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯಪ್ರವಾಸ, ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ 8 ದಿನಗಳಿಂದ ಕಾರ್ಯಾಚರಣೆ ಸೇರಿದಂತೆ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ ಗ್ಯಾರೆಂಟಿ ಯೋಜನೆ ನಿಲ್ಲಿಸುವ ಕಾನೂನು ತರುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಮತ ಹಾಕಿ ಯೋಜನೆ ನಿಲ್ಲಿಸುವ ಕೆಲಸಕ್ಕೆ ಕೈಹಾಕಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆ ಮನೆಗೂ ತಿಳಿಹೇಳಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇತ್ತ ಸತತ ವಾಗ್ದಾಳಿ ನಡೆಸತ್ತಿರುವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧವೂ ಡಿಕೆಶಿ ಹರಿಹಾಯ್ದಿದ್ದಾರೆ. ಹಿಂದೂ ಧರ್ಮದ ರಕ್ಷಣೆಗೆ ದತ್ತಪೀಠ ಮಾಲೆ ಧರಿಸುತ್ತೇನೆ. ಹಿಂದೂ ಧರ್ಮ ರಕ್ಷಣೆ ನಿಂತರೆ ಅದರಲ್ಲಿ ತಪ್ಪೇನಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹೆಚ್‌ಡಿಕೆ ನಿರ್ಧಾರವನ್ನು ಮುಸ್ಲಿಂ ಮುಖಂಡ ಸಿಎಂ ಇಬ್ರಾಹಿಂ ಟೀಕಿಸಿದ್ದಾರೆ. ಬಿವೈ ವಿಜಯೇಂದ್ರ ರಾಜ್ಯ ಪ್ರವಾಸ, ಸುರಂಗದಲ್ಲಿ ಕಾರ್ಮಿಕರ ರಕ್ಷಣಾ ಕಾರ್ಯ ಸೇರಿದಂತೆ ಇಂದಿನ ಇಡಿ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video