ಕರ್ನಾಟಕದಲ್ಲಿ ಬರ,ತಮಿಳುನಾಡು 4 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಕಾವೇರಿ ನೀರು ಬಳಕೆ!
ನಾಳೆ ವಿಕಾಸಸೌಧ ಎದುರು ಯಡಿಯೂರಪ್ಪ-ಕುಮಾರಸ್ವಾಮಿ ಜಂಟಿ ಪ್ರತಿಭಟನೆ,114 ಟಿಎಂಸಿ ಸಾಮರ್ಥ್ಯದ ಜಲಾಶದಲ್ಲಿ ಈಗ ಇರುವುದು 60 ಟಿಎಂಸಿ ಮಾತ್ರ, ರೈತರ 5 ಬೇಡಿಕೆ ಕುರಿತು ಶೀಘ್ರದಲ್ಲೇ ಸಿಎಂ ಸಭೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ತಮಿಳುನಾಡು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿಲ್ಲ. ಬರೋಬ್ಬರಿ 4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಕಾವೇರಿ ನೀರು ಬಳಕೆ ಮಾಡಿಕೊಳ್ಳುತ್ತಿದೆ. ಕಾವೇರಿ ನೀರನ್ನು ಇಂತಿಷ್ಟೇ ಪ್ರದೇಶಕ್ಕೆ ಬಳಸಿಕೊಳ್ಳುವಂತೆ ಆದೇಶ ನೀಡಿದೆ. ಆದರೆ ಇದನ್ನು ತಮಿಳುನಾಡು ಮೀರಿದೆ.ಕೆಆರ್‌ಎಸ್ ಜಲಾಶಯ 114 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಸದ್ಯ ಜಲಾಶಯದಲ್ಲಿರುವುದು 60 ಟಿಎಂಸಿ ಮಾತ್ರ. ಇದರಲ್ಲಿ ಅಕ್ಟೋಬರ್ 15ರ ವರೆಗೆ 5 ಟಿಎಂಸಿ ನೀರು ಬಿಡಬೇಕಾಗಿದೆ. ಇನ್ನು 5 ಟಿಎಂಸಿ ನೀರು ಬಳಲು ಸಾಧ್ಯವಿಲ್ಲ. ಕರ್ನಾಟಕ ಕುಡಿಯುವ ನೀರಿನ ಅಭಾವ ಎದುರಿಸುತ್ತಿದೆ. ಆದರೆ ತಮಿಳುನಾಡು ತನ್ನ ಕೃಷಿಕರಿಗೆ ನೀರಿಗೆ ಪಟ್ಟು ಹಿಡಿದು ಯಶಸ್ವಿಯಾಗಿದೆ.