Today Horoscope: ಅಮಾವಾಸ್ಯೆ ಲಕ್ಷ್ಮೀ ಹಿನ್ನೆಲೆ-ಮಹತ್ವವೇನು? ಮನಸ್ಸಿನ ಕೊಳೆಯನ್ನು ಗುಡಿಸಿಹಾಕುವುದು ಈ ಹಬ್ಬದ ಸಂದೇಶ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸೋಮವಾರ, ಅಮಾವಾಸ್ಯೆ ತಿಥಿ, ವಿಶಾಖ ನಕ್ಷತ್ರ.

ಭಾನುವಾರ ಮಧ್ಯಾಹ್ನದಿಂದ ಅಮಾವಾಸ್ಯೆ ಆರಂಭವಾಗಿದೆ. ಗೋಧೂಳಿ ಲಗ್ನದಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡುವುದು ಒಳ್ಳೆಯದು. ಇಂದು ಕೊಳೆಯನ್ನು-ಕಸವನ್ನು ನಿವಾರಿಸಿಕೊಳ್ಳುವ ದಿನವಾಗಿದೆ. ಧನ ಸಮೃದ್ಧಿಗಾಗಿ ಈಗ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಇಂದು ಸಂಜೆ ದೀಪಗಳ ಉತ್ಸವವನ್ನು ಮಾಡಬಹುದು. ಜೊತೆಗೆ ಗೋವುಗಳಿಗೆ ಪೂಜೆ ಮಾಡಿ, ಯಾಕೆಂದರೆ ಗೋ ನಿಜವಾದ ಸಂಪತ್ತಾಗಿದೆ. ಗೋ ಕೂಡ ಲಕ್ಷ್ಮೀ ಸ್ವರೂಪವಾಗಿದೆ. ಇದರ ಸೇವೆ ಮಾಡುವುದು ಅದೃಷ್ಟದ ಕೆಲಸವಾಗಿದೆ. ಗೋವು ಅನುಗ್ರಹಿಸಿದ್ರೆ, ಆ ಮನೆ ಸಮೃದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ವೀಕ್ಷಿಸಿ: Weekly-Horoscope: ದೀಪಾವಳಿ ಹಬ್ಬದ ವಿಶೇಷತೆ ಏನು ? ಈ ವಾರದ ಭವಿಷ್ಯ ಹೀಗಿದೆ..

Related Video