Panchang: ಇಂದು ಆಂಜನೇಯನಿಗೆ ಜೇನಿನ ಅಭಿಷೇಕ ಮಾಡಿಸಿ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಪ್ರತಿಪತ್ ತಿಥಿ, ವಿಶಾಖಾ ನಕ್ಷತ್ರ .
ಪ್ರತಿಪತ್ ಮೊದಲ ತಿಥಿಯನ್ನು ನಂದಾ ತಿಥಿ ಎನ್ನಲಾಗುತ್ತದೆ. ಇದು ವರ್ಜ್ಯ ತಿಥಿಯಾಗಿದೆ. ಈ ದಿನ ಶುಭ ಕಾರ್ಯ ಮಾಡುವುದಿಲ್ಲ. ಜೊತೆಗೆ ಶನಿವಾರವೂ ಆಗಿದ್ದೂ, ವಿಶಾಖಾ ನಕ್ಷತ್ರವಾಗಿರುವುದರಿಂದ ಇಂದು ಶುಭ ಕಾರ್ಯಗಳಿಗೆ ಪ್ರಶಸ್ತವಲ್ಲ. ಆದರೆ, ದೇವರ ಆರಾಧನೆ ಮಾಡಬಹುದು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇಂದು ಆಂಜನೇಯ ಹಾಗೂ ಶನೈಶ್ಚರನನ್ನು ಪೂಜಿಸಬೇಕು. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.