Panchang: ಇಂದು ಕಾಮದಹನ; ಇದರ ಹಿನ್ನೆಲೆ ಏನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪೌರ್ಣಮಿ ತಿಥಿ, ಪುಬ್ಬಾ ನಕ್ಷತ್ರ.

ಫಾಲ್ಗುಣ ಮಾಸದ ಪೌರ್ಣಮಿ ಇಂದು. ಈ ದಿನವನ್ನು ನಾವು ಕಾಮದಹನ, ಹೋಲಿಕಾ ದಹನ, ಮನ್ಮಥ ದಹನ ಎಂಬ ಹೆಸರುಗಳಿಂದ ಕರೆಯುತ್ತೇವೆ. ಕಾಮ ಎಂದರೆ ಮದನ. ಅವನು ಬ್ರಹ್ಮನಿಂದ ಯಾರನ್ನೂ ಮೋಹಿಸುವ ವರ ಪಡೆದ. ಅವನದನ್ನು ಬ್ರಹ್ಮನ ಮೇಲೇ ಪ್ರಯೋಗಿಸಿ ನೋಡಿದ. ಇದರಿಂದ ಬ್ರಹ್ಮ ತನ್ನ ಸೃಷ್ಟಿ ಸಂಧ್ಯೆಯ ಮೇಲೇ ಮೋಹಿಸುವಂತಾಯಿತು. ನಂತರದಲ್ಲಿ ಮನ್ಮಥ ಈ ಮೋಹದ ಬಾಣವನ್ನು ಎಲ್ಲರ ಮೇಲೆ ಪ್ರಯೋಗಿಸಲಾರಂಭಿಸಿದ. ಆಗ ಶಿವ ಬ್ರಹ್ಮನ ಮಾಯೆಯನ್ನು ಕಳೆದ. ಮನ್ಮಥನಿಗೆ ಶಾಪ ಕೊಟ್ಟ. ನಂತರದಲ್ಲಿ ಏನಾಯಿತು ಎಂಬ ಕತೆಯನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲೇ ಕೇಳೋಣ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Relationship Astrology: ಸಂಗಾತಿಯಿಂದ ಪ್ರತಿ ರಾಶಿಯವರು ಬಯಸುವುದೇನು?

Related Video