Panchanga: ಇಂದು ಗೌರಿಯನ್ನು ಆರಾಧನೆ ಮಾಡುವುದರಿಂದ ಸುಮಂಗಲಿ ಪ್ರಾಪ್ತಿ!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Mar 23, 2023, 7:21 AM IST | Last Updated Mar 23, 2023, 7:21 AM IST

ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಗುರುವಾರ, ದ್ವಿತೀಯ ತಿಥಿ, ರೇವತಿ ನಕ್ಷತ್ರ. ಈ ದಿವಸ ಗೌರಿ ಪೂಜೆಯನ್ನು ಮಾಡಬೇಕು. ಗೌರಿಯನ್ನು ಆರಾಧನೆ ಮಾಡುವುದರಿಂದ ಸುಮಂಗಲಿ ಪ್ರಾಪ್ತಿಯಾಗುತ್ತದೆ. ಈ ದಿನ ಹೆಣ್ಣು ಮಕ್ಕಳು ಅಂದರೆ ಸುಮಂಗಲಿಯರು ಮುತ್ತೈದೆಯರನ್ನು ಕರೆದು ಅವರ ಕಾಲನ್ನು ತೊಳೆದು ಅರಿಶಿನ-ಕುಂಕುಮ ಹಚ್ಚಿ, ಅವರಿಗೆ ಉಡುಗೊರೆಗಳನ್ನು ಕೊಟ್ಟು ಆಶಿರ್ವಾದ ಪಡೆದರೆ ಸುಮಂಗಲಿ ಅಭಿವೃದ್ದಿಯ ಸಂಕೇತವಾಗುತ್ತದೆ. ಮತ್ತು ಚಂದ್ರ ದರ್ಶನವನ್ನು ಮಾಡಬೇಕು. ಜೊತೆಗೆ ಈ ದಿನದ ಮಹತ್ವ ಏನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ.