Panchanga: ಈ ದಿನದ ರಾಶಿ ಭವಿಷ್ಯ ಹೀಗಿದ್ದು, ಇಂದು ಬುಧನ ಆರಾಧನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಬುಧವಾರ, ದ್ವಿತೀಯ ತಿಥಿ, ಉತ್ತರಾಷಾಢ ನಕ್ಷತ್ರ. ಈ ದಿನ ಬುಧವಾರವಾಗಿದ್ದು, ಬುಧನ ಆರಾಧನೆಯನ್ನು ಬುಧನ ಓರೆಯಲ್ಲಿ ಮಾಡಬಹುದು. ಪ್ರಾರಂಭದಲ್ಲಿ ಸೂರ್ಯೋದಯದ ಒಂದು ಗಂಟೆಗಳ ಕಾಲ ಆರಾಧನೆಯನ್ನು ಆರಂಭಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಓದಿದ್ದು, ಮೆರತುಹೋಗುತ್ತಿದ್ದು, ನೆನಪಿಗೆ ಬರುತ್ತಿಲ್ಲ, ವಿಚಲಿತನಾಗುತ್ತಿದ್ದೀನಿ ಈ ತರಹದ ಸಮಸ್ಯೆ ಇರುವವರೆಲ್ಲ ಈ ದಿವಸ ಸೂರ್ಯೋದಯದ ಪ್ರಾರಂಭದ ಕಾಲದಲ್ಲಿ ವಿಷ್ಣುವಿನ ಸನ್ನಿಧಾನದಲ್ಲಿ ಹೆಸರುಕಾಳನ್ನು ಹಸಿರು ವಸ್ರ್ತದಲ್ಲಿ ಹಾಕಿ ಕೊಟ್ಟರೆ ವಿಶೇಷವಾದ ಬುದ್ದಿ ಬಲ ಬರುತ್ತದೆ. ಅಲ್ಲದೇ ಬುಧನ ಜಪ ಮಾಡಿದರೆ ಬುಧನ ಅನುಗ್ರಹಕ್ಕೆ ಪಾತ್ರರಾಗಬಹುದು.

Related Video