Asianet Suvarna News Asianet Suvarna News

ಸದನದೊಳಗೆ ಬಿಜೆಪಿ ಪ್ರತಿಭಟನೆ ಕೋಲಾಹಲ, ಹೊರಗೆ ಕಾಂಗ್ರೆಸ್ ಜಾತಿ ರಾಜಕೀಯ!

ದಲಿತ ಪ್ಲೇಕಾರ್ಡ್ ಬಳಸಿದ ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ ವಿರುದ್ಧ ಹೊಸ ಅಸ್ತ್ರ, ಆಸ್ಪತ್ರೆ ದಾಖಲಾದ ಯತ್ನಾಳ್ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ,ರ್ನಾಟಕದ ಕೆಳ ಹಾಗೂ ಮೇಲ್ಮನೆಯಲ್ಲಿ ನಡೆದಿದೆ ದುರಂತ ಸೇರಿದಂತೆ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಕಾಂಗ್ರೆಸ್ ಆಯೋಜಿಸಿದ ವಿಪಕ್ಷಗಳ ಮತ್ರಿ ಕೂಟ ರಾಜಕೀಯ ಕಾರ್ಯಕ್ರಮಕ್ಕೆ ಸರ್ಕಾರಿ ಐಎಎಸ್ ಅಧಿಕಾರಿಗಳ ನಿಯೋಜನೆ ಮಾಡಿರುವುದು ಇದೀಗ ಕಲಾಪದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಗದ್ದಲದ ನಡುವೆ ಮಸೂದೆ ಮಂಡನೆ ನಡೆದಿದೆ. ಇದು ಮತ್ತಷ್ಟು ಪ್ರತಿಭಟನೆಗೆ ಕಾರಣವಾಗಿ ಭಾರಿ ಕೋಲಾಹಲವೇ ನಡೆದಿದೆ.ಬಿಜೆಪಿ ನಾಯಕರ ಪ್ರತಿಭಟನೆ ಹಾಗೂ ಗಲಾಟೆಗೆ ಸಚಿವ ಪ್ರಿಯಾಂಕ್ ಖರ್ಗೆ ಜಾತಿ ಬಣ್ಣ ಹಚ್ಚಿದ್ದಾರೆ.ಬಿಜೆಪಿ ನಾಯಕರು ಸಭಾಪತಿ ಮೇಲೆ ಮಸೂದೆ ಪ್ರತಿ ಹರಿದು ಎಸೆದ ಘಟನೆಯನ್ನು ಕಾಂಗ್ರೆಸ್ ಜಾತಿ ಎಳೆದುತಂದಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ದಲಿತ ನಾಯಕ ಮುಖಮೇಲೆ ಪ್ರತಿ ಹರಿದು ಎಸೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದಿನ ಕಲಾಪದಲ್ಲಿ ನಡೆದ ಹೈಡ್ರಾಮ, ಪ್ರತಿಭಟನೆ  ಸೇರಿದಂತೆ ಇಡಿ ದಿನದ ಪ್ರಮುಖ ಸುದ್ದಿಯ ವಿಡಿಯೋ ನ್ಯೂಸ್ ಹವರ್ ಇಲ್ಲಿದೆ.

Video Top Stories