Panchang: ಇಂದು ರಥಸಪ್ತಮಿ, ತಂದೆ ಮಕ್ಕಳ ನಡುವೆ ಪ್ರೀತಿ ಹೆಚ್ಚಿಸಲು ಸೂರ್ಯಾರಾಧನೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಶನಿವಾರ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರ.

ಇಂದು ರಥ ಸಪ್ತಮಿ. ಇದೊಂದು ಶ್ರೇಷ್ಠ ದಿನ, ಜಯವನ್ನು ತಂದುಕೊಡುವ ದಿನ. ಶನಿವಾರ ಸೂರ್ಯನ ಮಗನ ದಿನ. ಇಂದು ರಥಸಪ್ತಮಿ ಬಂದಿರುವುದು ಬಹಳ ಉತ್ತಮವಾಗಿದೆ. ತಂದೆ ಮಕ್ಕಳ ನಡುವೆ ಕಲಹವಿದ್ದರೆ ಇಂದು ಸೂರ್ಯನ ಆರಾಧಿಸುವುದರಿಂದ ಸಂಬಂಧ ಸರಿ ಹೋಗುವುದು. ಪ್ರತಿಯೊಬ್ಬರೂ ಸೂರ್ಯನಿಗೆ ನಮಿಸಿ. ಎಕ್ಕೆ ಪತ್ರಗಳಿಂದ ಸ್ನಾನ ಮಾಡಿ. ಕೆಂಪು ರಂಗೋಲಿ ಹಾಕಿ. ಗಾಯತ್ರಿ ಮಂತ್ರ ಹಾಗೂ ಸವಿತ್ರ ಮಂತ್ರಕ್ಕೆ ಶಕ್ತಿ ತುಂಬುವವನು ಸೂರ್ಯ. ಸೂರ್ಯಾರಾಧನೆಯ ಮಹತ್ವ ತಿಳಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

Saturday luck: ಶನಿವಾರ ಶಾಪಿಂಗ್ ಓಕೆ, ಆದ್ರೆ ಈ ವಸ್ತುಗಳ್ನ ಮಾತ್ರ ಮನೆಗೆ ತರ್ಬೇಡಿ!

Related Video