Today Rashibhavishy: ಮೇಷ ರಾಶಿಯವರಿಗೆ ಇಂದು ಸಂಗಾತಿ ವಿಚಾರದಲ್ಲಿ ಅಸಮಾಧಾನ..ಪರಿಹಾರಕ್ಕೆ ಹೀಗೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Aug 1, 2023, 8:58 AM IST | Last Updated Aug 1, 2023, 8:58 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪೌರ್ಣಮಿ ತಿಥಿ, ಉತ್ತರಾಷಾಢ ನಕ್ಷತ್ರ.

ಅಧಿಕ ಮಾಸದಲ್ಲಿ ಪೌರ್ಣಮಿ ಬಂದಿರುವುದರಿಂದ ದಾನವನ್ನು ಮಾಡಿ. ಅಕ್ಕಿಯಿಂದ ಮಾಡಿದ 33 ಕಜ್ಜಾಯವನ್ನು ದಾನವಾಗಿ ಕೊಡಿ. ಈ ದಿನ ವೃಷಭ ರಾಶಿಯವರಿಗೆ ದೈವ ಸಹಾಯವಿದ್ದು, ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಜೊತೆಗೆ ಸಂಗಾತಿ ವಿಚಾರದಲ್ಲಿ ಅಸಮಾಧಾನ ಇರಲಿದೆ. ಇಂದು ಈ ರಾಶಿಯವರು ಸುಬ್ರಹ್ಮಣ್ಯ ಸ್ವಾಮಿಗೆ ಜೇನು ಸಮರ್ಪಣೆ ಮಾಡಿ. ಧನಸ್ಸು ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲವಿದ್ದು, ಅನಗತ್ಯ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಕೃಷ್ಣ ಸನ್ನಿಧಾನದಲ್ಲಿ ತುಳಸಿ ಅರ್ಚನೆ ಮಾಡಿಸಿ.

ಇದನ್ನೂ ವೀಕ್ಷಿಸಿ:  ಉಗ್ರರ ತರಬೇತಿ ಕೇಂದ್ರಗಳಾಗುತ್ತಿದೆಯಾ ಜೈಲು? ಕುಕ್ಕರ್ ಸ್ಫೋಟದ ಉಗ್ರನ ಹಿಂದೆ ಹಿಂಡಲಗಾ ಕತೆ!