ಉಗ್ರರ ತರಬೇತಿ ಕೇಂದ್ರಗಳಾಗುತ್ತಿದೆಯಾ ಜೈಲು? ಕುಕ್ಕರ್ ಸ್ಫೋಟದ ಉಗ್ರನ ಹಿಂದೆ ಹಿಂಡಲಗಾ ಕತೆ!

ಕರ್ನಾಟಕದ ಜೈಲಿನಲ್ಲಿ ಇರುವ ಕ್ರಿಮಿನಲ್‌ಗಳು ಉಗ್ರರಾಗಿ ಹೊರಬಂದು ಸ್ಫೋಟಕ ನಡೆಸುತ್ತಿದ್ದಾರೆ. ಇತ್ತ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 20 ಸ್ಥಾನ ಗೆಲ್ಲಲು ಕಾಂಗ್ರೆಸ್ ಪ್ಲಾನ್, ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ, ಉಡುಪಿ ವಿಡಿಯೋ ಪ್ರಕರಣ, ಪ್ರಶ್ನಿಸಿದ ವಿದ್ಯಾರ್ಥಿನಿಯರಿಗೆ ಬೆದರಿಕೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಕರ್ನಾಟಕದ ಜೈಲುಗಳು ಉಗ್ರರ ತರಬೇತಿ ಕೇಂದ್ರಗಳಾಗುತ್ತಿದೆಯಾ ಅನ್ನೋ ಪ್ರಶ್ನೆ ಇದೀಗ ಶುರುವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಶಂಕಿತರ ಭಯೋತ್ವಾದಕರ ಬಂಧನವಾಗಿತ್ತು. ಇವರು ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋದ ಆರೋಪಿಗಳು ಉಗ್ರರರಾಗಿ ಜೈಲಿನಿಂದ ಹೊರಬಂದು ವಿಧ್ವಂಸಕ ಕೃತ್ಯಕ್ಕೆ ತಯಾರಿ ಮಾಡುವಾಗಲೇ ಬಂಧನಕ್ಕೊಳಗಾಗಿದ್ದಾರೆ. ಇದೇ ರೀತಿ ಕ್ರಿಮಿನಲ್ ಆಗಿ ಜೈಲಿಗೆ ಹೋಗಿ ಉಗ್ರರಾಗಿ ಹೊರಬಂದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ ಪ್ರಕರಣದ ಉಗ್ರ ಶಾರೀಕ್‌ಗೆ ಬಾಂಬ್ ಇಡಲು ಕಲಿಸಿದ್ದು ಬೆಳಗಾವಿಯ ಹಿಂಡಲಗ ಜೈಲಿನಲ್ಲಿದ್ದ ಉಗ್ರ ಅಫ್ಸರ್ ಫಾಶ. ಈ ಮೂಲಕ ಕರ್ನಾಟಕದ ಜೈಲುಗಳು ಉಗ್ರರ ಉತ್ಪಾದಕರ ಕೇಂದ್ರಗಳಾಗುತ್ತಿದೆ.

Related Video