
ಇಂದು ಕನಕದಾಸ ಜಯಂತಿ, 'ನಾನು ಹೋದರೆ ಹೋದೇನು' ಎಂಬ ತತ್ವ ಸಾರಿದ ದಾಸಶ್ರೇಷ್ಠರನ್ನು ಸ್ಮರಿಸೋಣ
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಮೃಗಶಿರ ನಕ್ಷತ್ರ, ಇಂದು ಸೋಮವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಮೃಗಶಿರ ನಕ್ಷತ್ರ, ಇಂದು ಸೋಮವಾರ. ಕಾರ್ತೀಕ ಸೋಮವಾರದಂದು ಈಶ್ವರನ ಸನ್ನಿಧಾನಕ್ಕೆ ಹೋಗಿ ನದಿ ಸ್ನಾನ ಮಾಡುವುದರಿಂದ ವಿಶೇಷ ಫಲಗಳಿವೆ. ದೀಪದಾನವನ್ನೂ ಮಾಡಿದರೆ ಉತ್ತಮ. ಇಂದು ಕನಕದಾಸರ ಜಯಂತಿಯೂ ಹೌದು.