Panchanga: ಇಂದು ಚಂದ್ರ ಜಯಂತಿ, ಚಂದ್ರಾರಾಧನೆಯಿಂದ ಮನಸ್ಸಿಗೆ ನೆಮ್ಮದಿ, ಆರೋಗ್ಯ ವೃದ್ಧಿ
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತೀಕ ಮಾಸ, ಶುಕ್ಲಪಕ್ಷ, ಪೌರ್ಣಮಿ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಶುಕ್ರವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತೀಕ ಮಾಸ, ಶುಕ್ಲಪಕ್ಷ, ಪೌರ್ಣಮಿ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಶುಕ್ರವಾರ. ಕಾರ್ತೀಕ ಮಾಸದ ಪೌರ್ಣಮಿಯಂದು ಪ್ರಣತೆಯನ್ನು ಹಚ್ಚಿ ಪುಷ್ಕರಣಿಯಲ್ಲಿ, ನದಿಯಲ್ಲಿ ತೇಲಿ ಬಿಡಬೇಕು. ಹೀಗೆ ಮಾಡುವುದರಿಂದ ವಿಶೇಷ ಪುಣ್ಯಫಲಗಳಿದ್ದಾವೆ ಎನ್ನಲಾಗುತ್ತದೆ. ಜೊತೆಗೆ ಇಂದು ಚಂದ್ರ ಜಯಂತಿ. ಮನಸ್ಸಿನ ಪ್ರಭಾವ ಬೀರುವವನು ಚಂದ್ರ. ಈತನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.