Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸೋಮವಾರ, ಪ್ರತಿಪತ್‌ ತಿಥಿ, ಶ್ರವಣ ನಕ್ಷತ್ರ.

ಸೋಮವಾರ ಶ್ರವಣ ನಕ್ಷತ್ರ ಬಂದಿದ್ದು, ಇಂದು ಹರಿ-ಹರರ ಪ್ರಾರ್ಥನೆ ಮಾಡಿ. ವಿಷ್ಣು ಸನ್ನಿಧಾನದಲ್ಲಿ ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕ ಮಾಡಿಸಿ. ಮೇಷ ರಾಶಿಯವರಿಗೆ ತಾಯಿ ಬಂಧುಗಳ ಸಹಕಾರ ಇರಲಿದೆ. ಕೃಷಿಕರಿಗೆ ಅನುಕೂಲ. ವಸ್ತು ನಷ್ಟತೆ. ಸ್ತ್ರೀಯರಿಗೆ ಬಲ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ. ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ದೇವತಾ ಸಂಬಂಧಿ ಕಾರ್ಯಗಳು. ಸಹೋದರರಲ್ಲಿ ಉತ್ತಮ ಒಡನಾಟ. ತಂದೆ-ಮಕ್ಕಳಲ್ಲಿ ಸಾಮರಸ್ಯ. ದಾಂಪತ್ಯದಲ್ಲಿ ಕಲಹ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಕುಮಾರಸ್ವಾಮಿ ಮಿಲಿಟರಿ ಕರ್ಕೊಂಡು ಬಂದಿದ್ದಾರಾ..? ಡಿಕೆಶಿ ಹೇಳಿಕೆಗೆ ಹೆಚ್‌ಡಿಕೆ ಟಾಂಗ್

Related Video