Today Horoscope: ಇಂದು ಕಾರ್ತಿಕ ಮಾಸ ಮುಗಿಯಲಿದ್ದು, ದೀಪವನ್ನು ಹಚ್ಚುವುದರಿಂದ ಸಿಗುವ ಫಲವೇನು ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಅಮಾವಾಸ್ಯೆ ತಿಥಿ, ಅನೂರಾಧ ನಕ್ಷತ್ರ.

ಇಂದು ಕಾರ್ತಿಕ ಮಾಸ ಮುಗಿಯಲಿದೆ. ದೀಪವನ್ನು ಬೆಳಗುವುದರಿಂದ ಅಜ್ಞಾನ ಕಳೆದು ಜ್ಞಾನ ಬರಲಿದೆ. ಜೊತೆಗೆ ದೀಪದಾನವನ್ನು ಮಾಡಿ. ಅಮಾವಾಸ್ಯೆ ಇರುವುದರಿಂದ ಪಿತೃ ದೇವತೆಗಳ ಸ್ಮರಣೆಯನ್ನು ಮಾಡಿ. ಇನ್ನೂ ಮೇಷ ರಾಶಿಯವರಿಗೆ ಕಣ್ಣಿನ ಬಾಧೆ ಕಾಡಲಿದೆ. ಅನಗತ್ಯ ವ್ಯಯ. ವೃತ್ತಿಯಲ್ಲಿ ಅನುಕೂಲವಿದೆ. ಮನೋವ್ಯಥೆ. ಈಶ್ವರ ಸನ್ನಿಧಾನಕ್ಕೆ ದೀಪ ದಾನ ಮಾಡಿ. ವೃಷಭ ರಾಶಿಯವರಿಗೆ ವಿದೇಶ ವಹಿವಾಟಿನಿಂದ ಅನುಕೂಲ. ಔಷಧ ವ್ಯಾಪಾರಿಗಳಿಗೆ ಲಾಭ. ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಮನಸ್ತಾಪ. ಖಿನ್ನತೆಯ ದಿನ. ಶಿವಶಕ್ತಿಯರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಪುಣ್ಯಕ್ಷೇತ್ರದ ಪಕ್ಕದ ಕಗ್ಗೆರೆಯಲ್ಲಿ ಇದೇನಿದು ಪವಾಡ.. ವಿಸ್ಮಯ..!? ಎಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ..!

Related Video