Asianet Suvarna News Asianet Suvarna News

ಪುಣ್ಯಕ್ಷೇತ್ರದ ಪಕ್ಕದ ಕಗ್ಗೆರೆಯಲ್ಲಿ ಇದೇನಿದು ಪವಾಡ.. ವಿಸ್ಮಯ..!? ಎಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ..!

ಕಗ್ಗರೆ ತಪೋವನದಲ್ಲಿ ಸಿದ್ದಲಿಂಗೇಶ್ವರರ ಪವಾಡ..!
ತಪಸ್ಸು ಮಾಡಿದ ಸ್ಥಳದಲ್ಲಿ‌ ಬೆಳೆಯುತ್ತಿದೆ ಹುತ್ತ..!
ಗುರುಗಳ ಗದ್ದುಗೆ ಸುತ್ತ ಮತ್ತೆ ಬೆಳೆಯುತ್ತಿದೆ ಹುತ್ತ..!

ಯಡಿಯೂರ ಸಿದ್ದಲಿಂಗೇಶನ ಕ್ಷೇತ್ರ ಅಂದ್ರೆ ಅಲ್ಲಿನ ಅನ್ನದಾಸೋಹ ನೆನಪಾಗುತ್ತೆ. ಅಲ್ಲಿನ ಪರಿಶುದ್ಧ ವಾತಾವರಣ ಗಮನ ಸೆಳೆಯುತ್ತೆ. ಅಂತೆಯೆ ಯಡಿಯೂರಿನ ಸಿದ್ಧಲಿಂಗೇಶ್ವರನ(Yediyuru Siddhalingeshwara) ಸನ್ನಿಧಾನವು ಸಾಕಷ್ಟು ಪ್ರಾಮುಖ್ಯತೆಗಳಿಸಿದೆ. ಲಿಂಗಾಯತ ಸಮುದಾಯದವರ(Lingayat community) ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ ಶ್ರೀಕ್ಷೇತ್ರ ಯಡಿಯೂರು. ಸಿದ್ದಲಿಂಗೇಶ್ವರರ ಜೀವಂತ ಸಮಾಧಿಯ ಗದ್ದುಗೆ ನೋಡೋಕೆ ಕರ್ನಾಟಕದ(Karnataka) ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರ್ತಾರೆ. ಹದಿನೈದನೇಯ ಶತಮಾನದಲ್ಲಿದ್ದಿ ಲಿಂಗಾಯತ ಮತದ ಪರಮ ಸಂತರಾದ ತೊಂಟದ ಸಿದ್ಧಲಿಂಗರವರ ನಿರ್ವಿಕಲ್ಪ ಶಿವಯೋಗ ಸಮಾಧಿಯನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಈ ದಿವ್ಯ ಸನ್ನಿಧಾನದಲ್ಲಿ, ಈ ಪವಿತ್ರ ಸ್ಥಳದಲ್ಲಿ, ಸಿದ್ದಲಿಂಗೇಶ್ವರರು ಬರೊಬ್ಬರಿ 12 ವರ್ಷಗಳ ಕಾಲ ತಪಸ್ಸು ಮಾಡಿದ್ದ ಸ್ಥಳದಲ್ಲಿ ಇಂದು ದೊಡ್ಡ ಪವಾಡವೇ ನಡೆದಿದೆ. ಹದಿನೈದನೇ ಶತಮಾನದ ಸಂತರು ಭಕ್ತನ ಮಾತಿಗೆ ಕಟ್ಟು ಬಿದ್ದು ಹನ್ನೇರಡು ವರ್ಷಗಳ ಕಾಲ ಭಕ್ತನ ತೋಟದಲ್ಲೇ ತಪಸ್ಸು ಗೈದ ಮಹಾ ತಪಸ್ವಿ ಅಂದು ಅವರ ಸುತ್ತ ಬೆಳೆದಿದ್ದ ಆ ಹುತ್ತ ಇಂದಿಗೂ ಬೆಳೆಯುತ್ತಿದೆ ಎಂಬುದು ನಿಜಕ್ಕೂ ಆಶ್ಚರ್ಯಕರ ವಿಚಾರ ಇದು ಆ ಮಹಾ ಸಂತನ ಪವಾಡ ಎನ್ನುತ್ತಿದ್ದಾರೆ ಇಲ್ಲಿನ ಭಕ್ತರು. ಯಡಿಯೂರು ಸಿದ್ದಲಿಂಗೇಶ್ವರರು 12 ವರ್ಷ ತಪಸ್ಸು ಮಾಡಿದ ತಪೋ ಕ್ಷೇತ್ರ ಕಗ್ಗೇರಿಯಲ್ಲಿ ಹಾವಿನ ಮುತ್ತ ಮತ್ತೆ ಬೆಳೆಯಲು ಪ್ರಾರಂಭಿಸಿದೆ ದೇವಾಲಯದ ಜೀವನೋದ್ಧಾರಕ್ಕಾಗಿ ಕೆಲವು ಗೊಳಿಸಿದ ಜಾಗದಲ್ಲಿ ಹುತ್ತ ಬೆಳೆಯುತ್ತಿರುವುದು ಸಾರ್ವಜನಿಕರಲ್ಲಿ ಹಾಗೂ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ಇದನ್ನೂ ವೀಕ್ಷಿಸಿ:  10ರಲ್ಲಿ 6 ಜನರ ವಿದೇಶದ ಕನಸು ನನಸು, ಉಳಿದವರ ಕಥೆ..!? ‘ಡಂಕಿ’ ಈ ಪದ ಹುಟ್ಟು ಹಾಕಿದವರಾದ್ರೂ ಯಾರು..?

Video Top Stories