9.15 ಸೆಕೆಂಡಲ್ಲಿ 100 ಮೀ.: ಕಂಬಳದಲ್ಲಿ ಬೈಂದೂರು ವಿಶ್ವನಾಥ್ ಹೊಸ ದಾಖಲೆ!

ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಾಣವಾಗಿದೆ. ಶನಿವಾರ ಇಲ್ಲಿನ ಐಕಳದಲ್ಲಿ ನಡೆದ ಕಂಬಳದಲ್ಲಿ ಬೈಂದೂರಿನ ವಿಶ್ವನಾಥ್ ಅವರು ಓಡಿಸಿದ ಕೋಣಗಳು 9.15 ಸೆಂಡ್‌ನಲ್ಲಿ 100 ಮೀಟರ್ ತಲುಪುವ ಮೂಲಕ ದಾಖಲೆ ಸೃಷ್ಟಿಸಿವೆ.

Share this Video
  • FB
  • Linkdin
  • Whatsapp

ಮಂಗಳೂರು(ಫೆ.07) ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಾಣವಾಗಿದೆ. ಶನಿವಾರ ಇಲ್ಲಿನ ಐಕಳದಲ್ಲಿ ನಡೆದ ಕಂಬಳದಲ್ಲಿ ಬೈಂದೂರಿನ ವಿಶ್ವನಾಥ್ ಅವರು ಓಡಿಸಿದ ಕೋಣಗಳು 9.15 ಸೆಂಡ್‌ನಲ್ಲಿ 100 ಮೀಟರ್ ತಲುಪುವ ಮೂಲಕ ದಾಖಲೆ ಸೃಷ್ಟಿಸಿವೆ.

ಕಂಬಳದ ಫೋಟೋ ಹಾಕಿ ಉಪ ರಾಷ್ಟ್ರಪತಿ ಟ್ವೀಟ್‌

ಕಂಬಳ ಕರೆಯ ಉಸೇನ್ ಬೋಲ್ಟ್‌ ಎಂದೇ ಖ್ಯಾತಿ ಪಡೆದ ಶ್ರೀನಿವಾಸ್ ಗೌಡ ಅವರು ಕಳೆದ ವರ್ಷ ಫೆ.1ರಂದು ಐಕಳದಲ್ಲಿ ನಡೆದ ನೇಗಿಲ ಹಿರಿಯ ವಿಭಾಗದಲ್ಲಿ ಓಡಿಸಿದ ಕೋಣಗಳು 142.5 ಮೀ. ದೂರವನ್ನು ದಾಖಲೆಯ 13.13 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದವು. ಇದನ್ನು100 ಮೀಟಟರ್‌ಗೆ ತಾಲೆ ಹಾಕಿದಾಗ 9.55 ಸೆಕೆಂಡ್ ಆಗಿದ್ದು ಈ ಸಾಧನೆ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. 

Related Video