Asianet Suvarna News Asianet Suvarna News

ಕಂಬಳದ ಫೋಟೋ ಹಾಕಿ ಉಪ ರಾಷ್ಟ್ರಪತಿ ಟ್ವೀಟ್‌

ಕ್ರೀಡಾ ದಿನದ ಅಂಗವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿದ್ದು, ಕ್ರೀಡೆ ಮೇಲೆ ಕೊರೋನಾ ಮಹಾಮಾರಿ ಪ್ರಭಾವದ ಬಗ್ಗೆ ಹೇಳಿದ್ದಾರೆ. ಅಲ್ಲದೇ ಟ್ವೀಟ್ನಲ್ಲಿ ಕಂಬಳದ ಬಗ್ಗೆ ಉಲ್ಲೇಖಿಸಿದ್ದಾರೆ.

Vice president Venkaiah Naidu Tweets About Corona Effects On Sports
Author
Bengaluru, First Published Aug 30, 2020, 10:48 AM IST

ಮಂಗಳೂರು (ಆ.30): ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶುಕ್ರವಾರ ಅಂತಾರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದ ಫೋಟೋವನ್ನು ಹಂಚಿಕೊಂಡಿದ್ದಾರೆ. 

ಕಂಬಳದ ಚಿತ್ರ ಮಾತ್ರವಲ್ಲದೆ ಪೈಲ್ವಾನ ಜೊತೆಗೆ ಬಾಲಕನೊಬ್ಬನ ಕುಸ್ತಿ, ಬಾಲಕಿಯರು ಹಾಕಿ ಆಡುತ್ತಿರುವ, ವೃದ್ಧೆಯೊಬ್ಬರು ಶೂಟಿಂಗ್‌ನಲ್ಲಿ ನಿರತರಾಗಿರುವ ಚಿತ್ರಗಳನ್ನೂ ಹಾಕಿದ್ದಾರೆ. 

ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ: ಪ್ರಶಸ್ತಿಗಳ ನಗದು ಮೊತ್ತ ಗಣನೀಯ ಹೆಚ್ಚಳ!...

ಜೊತೆಗೆ ‘ಕೊರೋನಾದಿಂದ ಕ್ರೀಡೆಗೂ ತೊಂದರೆಯಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸೋಂಕು ಎದುರಿಸಲು ಸಾಧ್ಯ. ಆದ್ದರಿಂದ ನಿಯಮಿತವಾಗಿ ಯೋಗ, ವ್ಯಾಯಾಮ ಮಾಡಿ ‘ಫಿಟ್‌ ಇಂಡಿಯಾ’ವನ್ನು ಸಾಮೂಹಿಕ ಆಂದೋಲನವಾಗಿಸಿ ಎಂದು ಹಿಂದಿ ಭಾಷೆಯಲ್ಲಿ ಕರೆ ನೀಡಿದ್ದಾರೆ.

 

ಕೊರೋನಾ ಮಹಾಮಾರಿ ಕ್ರೀಡಾ ಕ್ಷೇತ್ರದಲ್ಲಷ್ಟೇ ಅಲ್ಲದೇ ಜನಜೀವನದ ಮೇಲೂ ಸಾಕಷ್ಟು ಪರಿಣಾಮ ಉಂಟು ಮಾಡಿದ್ದು, ಎಲ್ಲವನ್ನೂ ಕೆಲ ತಿಂಗಳು ಬುಡ ಮೇಲು ಮಾಡಿತ್ತು. ಸಂಪೂರ್ಣ ಜನಜೀವನವೇ ಅಸ್ತವ್ಯಸ್ತವಾಗಿತ್ತು. ಬರು ಬರುತ್ತಾ  ಬದುಕು ಹೊಂದಾಣಿಕೆಯಲ್ಲಿ ಸಾಗಿದ್ದು, ಕ್ರೀಡಾ ಕ್ಷೇತ್ರವೂ ಸಾಕಷ್ಟು ಪರಿಣಾಮ ಎದುರಿಸುವಂತಾಯ್ತು. ಅಲ್ಲದೇ ಹಲವು ಕ್ರೀಡಾ ಕೂಟಗಳು ರದ್ದು ಮಾಡಲಾಗಿತ್ತು.

Follow Us:
Download App:
  • android
  • ios