Asianet Suvarna News Asianet Suvarna News

ಯೋಗ ಕಲಿಯೋದು ಸುಲಭನಾ..? ಖೇಲೋ ಇಂಡಿಯಾದಲ್ಲಿ ಮಿಂಚಿದ ಯೋಗಪಟು ಖುಷಿ ಹೇಮಚಂದ್ರ ಸಂದರ್ಶನ

ಮೈಸೂರಿನ ವಿವೇಕಾನಂದ ಯೋಗ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿರುವ ಖುಷಿ ಹೇಮಚಂದ್ರ, ಆರು ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಯೋಗಾಸನ ಪ್ರದರ್ಶಿಸಿದ್ದು, 10 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದ್ದಾರೆ. 2017ರಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಖುಷಿ ಹೇಮಚಂದ್ರ ಅವರು ದೇಶಕ್ಕಾಗಿ ಮತ್ತಷ್ಟು ಪದಕ ಗೆಲ್ಲುವ ಕನಸು ಹೊಂದಿದ್ದಾರೆ.

ಬೆಂಗಳೂರು(ಮೇ.04): ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ (Khelo India University Games) ಮಂಗಳವಾರ(ಮೇ 03) ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು. ಇದೇ ವೇಳೆ ಮೈಸೂರಿನ ಯೋಗಪಟು, ಮೊದಲ ವರ್ಷ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿನಿ ಖುಷಿ ಹೇಮಚಂದ್ರ ಕಾರ‍್ಯಕ್ರಮದ ಮುಖ್ಯ ಆಕರ್ಷಣೆ ಎನಿಸಿದರು. ಅವರ ಪ್ರದರ್ಶನ ಕೇಂದ್ರ ಸಚಿವ ಅಮಿತ್‌ ಶಾ ಸೇರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮೈಸೂರಿನ ವಿವೇಕಾನಂದ ಯೋಗ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿರುವ ಖುಷಿ ಹೇಮಚಂದ್ರ, ಆರು ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಯೋಗಾಸನ ಪ್ರದರ್ಶಿಸಿದ್ದು, 10 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದ್ದಾರೆ. 2017ರಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಖುಷಿ ಹೇಮಚಂದ್ರ ಅವರು ದೇಶಕ್ಕಾಗಿ ಮತ್ತಷ್ಟು ಪದಕ ಗೆಲ್ಲುವ ಕನಸು ಹೊಂದಿದ್ದಾರೆ.

Khelo India University Games: 2 ರಾಷ್ಟ್ರೀಯ ದಾಖಲೆ, 76 ಕೂಟ ದಾಖಲೆಯೊಂದಿಗೆ ಯಶಸ್ವಿ ಮುಕ್ತಾಯ

2019ರಲ್ಲಿ ರಾಜ್ಯದ ಪ್ರತಿಷ್ಟಿತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಖುಷಿ ಅವರಿಂದ ಇಡೀ ರಾಜ್ಯ ಹಾಗೂ ದೇಶವೇ ಹೆಮ್ಮೆಪಡುವಂತಹ ಮತ್ತಷ್ಟು ಸಾಧನೆಗಳು ಮೂಡಿ ಬರಲಿ ಎನ್ನುವುದು ಏಷ್ಯಾನೆಟ್‌ ಸುವರ್ಣ ನ್ಯೂಸ್ ಹಾರೈಕೆ. ಖುಷಿ ಹೇಮಚಂದ್ರ ಅವರ ಸಂಪೂರ್ಣ ಸಂದರ್ಶನ ಇಲ್ಲಿದೆ ನೋಡಿ
 
Video Top Stories